ಪಾಕ್​ನಿಂದ ಒಳನುಸುಳಲು ಯತ್ನಿಸಿದ ಪಾಕ್​ ಉಗ್ರ ಬಿಎಸ್​ಎಫ್​ ಗುಂಡೇಟಿಗೆ ಬಲಿ.. 4 ಕೆಜಿ ಮಾದಕ ವಸ್ತು ವಶ: ವಿಡಿಯೋ - Pakistan intruder killed

🎬 Watch Now: Feature Video

thumbnail

By

Published : Jul 25, 2023, 5:23 PM IST

ಸಾಂಬಾ (ಜಮ್ಮು ಕಾಶ್ಮೀರ ) : ಜಮ್ಮು ಮತ್ತು ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ, ಮಾದಕವಸ್ತು ಕಳ್ಳಸಾಗಣೆ ಎಗ್ಗಿಲ್ಲದೇ ನಡೆಯುತ್ತಿದೆ. ನಿನ್ನೆ ಮಧ್ಯರಾತ್ರಿ ಪಾಕಿಸ್ತಾನದಿಂದ ಭಾರತದೊಳಕ್ಕೆ ನುಸುಳುತ್ತಿದ್ದ ಉಗ್ರನನ್ನು ಗುಂಡಿಕ್ಕಿ ಹತ್ಯೆ ಮಾಡಿ, 4 ಕೆಜಿ ಮಾದಕ ದ್ರವ್ಯವನ್ನು ವಶಕ್ಕೆ ಪಡೆಯಲಾಗಿದೆ.

ಸಾಂಬಾ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಮಾದಕವಸ್ತು ಕಳ್ಳಸಾಗಣೆ ಮಾಡುತ್ತಿದ್ದಾಗ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಕಾರ್ಯಾಚರಣೆ ನಡೆಸಿ, ಯತ್ನವನ್ನು ವಿಫಲಗೊಳಿಸಿದೆ. ಈ ವೇಳೆ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಹತ್ಯೆಗೀಡಾದ ನುಸುಳುಕೋರನ ಬಳಿಯಿದ್ದ ನಾಲ್ಕು ಕೆಜಿ ಮಾದಕ ವಸ್ತುವನ್ನು ಇದೇ ವೇಳೆ ವಶಪಡಿಸಿಕೊಳ್ಳಲಾಗಿದೆ  ಎಂದು ಬಿಎಸ್‌ಎಫ್ ಅಧಿಕಾರಿ ಮಂಗಳವಾರ ತಿಳಿಸಿದರು.

ಇದಕ್ಕೂ ಮುನ್ನ, ಸೋಮವಾರ ತಡರಾತ್ರಿ ರಾಮ್‌ಘರ್ ಸೆಕ್ಟರ್‌ನ ಎಸ್‌ಎಂ ಪುರ ಪೋಸ್ಟ್ ಬಳಿ ಗಡಿ ರಕ್ಷಣಾ ಪಡೆ ಸಿಬ್ಬಂದಿ ವ್ಯಕ್ತಿಯೊಬ್ಬರ ಅನುಮಾನಾಸ್ಪದ ಚಲನವಲನವನ್ನು ಪತ್ತೆ ಮಾಡಿದ್ದರು. ಒಳನುಸುಳುಕೋರನಿಗೆ ಹಲವು ಬಾರಿ ಎಚ್ಚರಿಕೆ ನೀಡಿದಾಗ್ಯೂ ಗಡಿ ದಾಟಲು ಯತ್ನಿಸಿದಾಗ ಗುಂಡಿನ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಈ ಪ್ರದೇಶದಲ್ಲಿ ಶೋಧ ಕಾರ್ಯ ಮುಂದುವರಿದಿದ್ದು, ಮೃತರ ಗುರುತು ಪತ್ತೆ ಮಾಡಲಾಗುತ್ತಿದೆ.

ಇದನ್ನೂ ಓದಿ: ಲಂಚ ಪಡೆಯುವಾಗ ಸಿಕ್ಕಿಬಿದ್ದು ಸಾಕ್ಷಿ ನಾಶಕ್ಕಾಗಿ 4,500 ರೂಪಾಯಿ ನೋಟುಗಳನ್ನೇ ನುಂಗಿದ ಚಾಲಾಕಿ ಅಧಿಕಾರಿ!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.