thumbnail

ದೇವನಹಳ್ಳಿಯಲ್ಲಿ ಆರ್​ಟಿಒ ಅಧಿಕಾರಿಗಳ ಕಾರ್ಯಾಚರಣೆ: ಟ್ಯಾಕ್ಸ್ ಕಟ್ಟದೇ ಸಂಚರಿಸುತ್ತಿದ್ದ ವಾಹನಗಳಿಗೆ ದಂಡದ ಬಿಸಿ

By ETV Bharat Karnataka Team

Published : Oct 17, 2023, 12:12 PM IST

ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಇಂದು ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಆರ್​ಟಿಒ ಅಧಿಕಾರಿಗಳು, ತೆರಿಗೆ ಶುಲ್ಕ ಪಾವತಿಸದೇ ಹೆಚ್ಚುವರಿ ಪ್ಯಾಸೆಂಜರ್ ಮತ್ತು ಗೂಡ್ಸ್​ಗಳನ್ನು ಸಾಗಿಸುತ್ತಿದ್ದ ಬಸ್​​ಗಳಿಗೆ ಶಾಕ್ ನೀಡಿದ್ದಾರೆ. ದೇವನಹಳ್ಳಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟೋಲ್ ಬಳಿ ಕಾರ್ಯಚರಣೆಗೆ ಇಳಿದ ಅಧಿಕಾರಿಗಳು ಟ್ಯಾಕ್ಸ್ ಕಟ್ಟದೆ ಓಡಾಡುತ್ತಿದ್ದ ಬಸ್​ಗಳ ಮಾಲೀಕರಿಗೆ ಬಿಸಿ ಮುಟ್ಟಿಸಿದರು. 

ರಾಜ್ಯ ಮತ್ತು ಅಂತಾರಾಜ್ಯದಲ್ಲಿ ಸಂಚಾರಿಸುವ ಬಸ್​ಗಳನ್ನು ತಡೆದು ಪರಿಶೀಲನೆ ನಡೆಸಿದರು. ಈ ವೇಳೆ ಟ್ಯಾಕ್ಸ್ ಕಟ್ಟದೇ ಹೆಚ್ಚುವರಿ ಪ್ರಯಾಣಿಕರು ಮತ್ತು ಸರಕುಗಳನ್ನು ತುಂಬಿಕೊಂಡು ಸಂಚಾರಿಸುತ್ತಿರುವುದು ಕಂಡು ಬಂದಿದೆ. ಸಂಚಾರ ನಿಮಯ ಉಲ್ಲಂಘಿಸಿರುವ ಖಾಸಗಿ ಬಸ್​ಗಳಿಗೆ ಅಧಿಕಾರಿಗಳು ದಂಡ ಹಾಕಿದ್ದಾರೆ. ದೇವನಹಳ್ಳಿ ಆರ್​ಟಿಒ ಶ್ರೀನಿವಾಸ್, ಸೀನಿಯರ್ ಬ್ರೇಕ್ ಇನ್​ಸ್ಪೆಕ್ಟರ್ ನರಸಿಂಹಮೂರ್ತಿ ಹಾಗೂ ನಾಗರಾಜ್ ನೇತೃತ್ವದ ತಂಡವು ಕಾರ್ಯಚರಣೆಯಲ್ಲಿ ತೊಡಗಿದ್ದರು.

ಇದನ್ನೂ ಓದಿ: ಶಿಕ್ಷಣ ಸಂಸ್ಥೆ ನಿರ್ಮಾಣಕ್ಕೆ ಜಮೀನು ಮಂಜೂರು : ಕಟ್ಟಡ ನಿರ್ಮಿಸದ ಹಿನ್ನೆಲೆ ಭೂಮಿ ಹಿಂಪಡೆದ ಕ್ರಮ ಎತ್ತಿಹಿಡಿದ ಹೈಕೋರ್ಟ್

ವಿಮಾನದ ಶೌಚಾಲಯದ ವಾಶ್ ಬೇಸಿನ್​ನಲ್ಲಿ 1.8 ಕೋಟಿ ರೂ. ಮೌಲ್ಯದ ಚಿನ್ನ ಪತ್ತೆ..

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.