ಹರ್ಷ ಹತ್ಯೆಗೆ ಒಂದು ವರ್ಷ: ಶಿವಮೊಗ್ಗದಲ್ಲಿ ಭಜರಂಗದಳದಿಂದ ಪಂಜಿನ ಮೆರವಣಿಗೆ - ವಿಶ್ವ ಹಿಂದೂ ಪರಿಷತ್ನ ವಾಸುದೇವ ಕಾಮತ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17806913-thumbnail-4x3-sanju.jpg)
ಶಿವಮೊಗ್ಗ: ಯುವಕ ಹರ್ಷನ ಹತ್ಯೆಯಾಗಿ ಇಂದಿಗೆ ಒಂದು ವರ್ಷ. ಘಟನೆಯ ಸ್ಮರಣಾರ್ಥ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳದ ವತಿಯಿಂದ ಇಂದು ನಗರದಲ್ಲಿ ಪಂಜಿನ ಮೆರವಣಿಗೆ ನಡೆಯಿತು. ನಗರದ ರಾಮಣ್ಣ ಶ್ರೇಷ್ಟಿ ಪಾರ್ಕ್‌ನಿಂದ ಶಿವಪ್ಪ ನಾಯಕ ವೃತ್ತದವರೆಗೂ ಮೆರವಣಿಗೆ ಸಾಗಿತು.
ಮೆರವಣಿಗೆಯಲ್ಲಿ ಹರ್ಷ ಹಿಂದೂ ಅಮರ್ ರಹೇ ಎಂದು ಘೋಷಣೆ ಕೂಗಿದರು. ಪಿಎಫ್ಐ ವಿರುದ್ದ ಆಕ್ರೋಶ ಕೇಳಿಬಂತು. ಹರ್ಷನ ಭಾವಚಿತ್ರ ಹಿಡಿದು ಕಾರ್ಯಕರ್ತರು ಸಾಗಿದರು. ಮೆರವಣಿಗೆಯಲ್ಲಿ ಪಂಜು ಹಿಡಿದು ಸಾಗಿದ ಭಜರಂಗದಳದ ಕಾರ್ಯಕರ್ತರು ಹರ್ಷನ ಪರ ಘೋಷಣೆ ಮೊಳಗಿಸಿದರು.
ಶಿವಪ್ಪ ನಾಯಕ ವೃತ್ತದಲ್ಲಿ ಹರ್ಷನ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ನಂತರ ಭಜರಂಗದಳದ ದೀನ ದಯಾಳು ಹಾಗೂ ವಿಶ್ವ ಹಿಂದೂ ಪರಿಷತ್ನ ವಾಸುದೇವ ಕಾಮತ್ ಅವರು ಹರ್ಷನ ಕುರಿತು ಭಾಷಣ ಮಾಡಿದರು. ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಿತ್ತು.
ಇದನ್ನೂ ಓದಿ: ಡಿ. ರೂಪಾ ವಿರುದ್ಧ ದೂರು ನೀಡಿದ ರೋಹಿಣಿ ಸಿಂಧೂರಿ ಪತಿ