ಮನುಷ್ಯನನ್ನು ಸೋಲಿಸುವ ವಸ್ತು ಇನ್ನು ಸೃಷ್ಟಿಯಾಗಿಲ್ಲ: ವಿದ್ಯಾರ್ಥಿಗಳಿಗೆ ರವಿ ಚನ್ನಣ್ಣನವರ್ ಕಿವಿಮಾತು

🎬 Watch Now: Feature Video

thumbnail

ಗಂಗಾವತಿ: ಈ ಸೃಷ್ಟಿಯಲ್ಲಿ ಮನಷ್ಯನನ್ನು ಸೋಲಿಸುವ ವಸ್ತು ಇನ್ನೂ ಸೃಷ್ಟಿಯಾಗಿಲ್ಲ ಎಂದು ಹೇಳುತ್ತಾರೆ. ಹೀಗಾಗಿ ಮಕ್ಕಳು ಪರೀಕ್ಷೆ ಸೇರಿದಂತೆ ಯಾವುದರ ಬಗ್ಗೆಯೂ ಭಯ ಆತಂಕ ಇರಿಸಿಕೊಳ್ಳಬಾರದು ಎಂದು ಐಪಿಎಸ್ ಅಧಿಕಾರಿ ರವಿ ಡಿ ಚನ್ನಣ್ಣನವರ್​ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದಾರೆ. ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಆಗಮಿಸಿದ್ದ ರವಿ ಡಿ ಚನ್ನಣ್ಣನವರ್​, ಶ್ರೀರಾಮನಗರದ ವಿದ್ಯಾನಿಕೇತನ ವಿದ್ಯಾಸಂಸ್ಥೆಗೆ ಭೇಟಿ ನೀಡಿ ಸಾವಿರಾರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋಟಿವೇಷನ್ ಭಾಷಣ ಮಾಡಿದರು. ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ಅಂಜಿಕೆ ಎಂಬುವುದು ನಮ್ಮನ್ನು ಸೋಲಿನ ಸಾಲಿಗೆ ಕೊಂಡೊಯ್ಯುತ್ತದೆ. ಅಂಜಿಕೆ ಬಿಟ್ಟರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಮನುಷ್ಯನನ್ನು ಸೋಲಿಸುವ ವಸ್ತು ಈ ಭೂಮಿಯಲ್ಲಿ ಇನ್ನೂ ಸೃಷ್ಟಿಯಾಗಿಲ್ಲ ಎಂಬ ಉಲ್ಲೇಖ ನಿನ್ನೆ ಮೊನ್ನೆಯದಲ್ಲ. ಪುರಾಣ ವೇದಗಳ ಕಾಲದಲ್ಲಿಯೇ ಇದು ಉಲ್ಲೇಖವಾಗಿದೆ. ಮನುಷ್ಯನ ಸಾಹಸದಿಂದಲೇ ಎಲ್ಲವನ್ನು ಗೆಲ್ಲಬಹುದು ಎಂಬುದನ್ನು ರಾಮಾಯಣದಂತ ಕಾಲಘಟ್ಟದಲ್ಲಿ ವಶಿಷ್ಠ ಮಹಾಋಷಿಗಳು ಶ್ರೀರಾಮನಿಗೆ ಹೇಳುತ್ತಾರೆ.

ಅಮೆರಿಕ ಇಂದು ಮಾನ್ಯತೆ ಪಡೆಯುತ್ತಿರುವುದು ಅನ್ವೇಷಣೆಗಳಿಂದ. ಭಾರತದಲ್ಲಿ ಶಕ್ತಿ, ಜನಸಂಖ್ಯೆ, ಸಂಪನ್ಮೂಲ ಎಲ್ಲವೂ ಇದೆ. ಆದರೆ, ನಾವು ನಮ್ಮ ಭೌದ್ಧಿಕ ವಿಕಸನವನ್ನು ಸೀಮಿತಗೊಳಿಸಿದ್ದೇವೆ. ಹೀಗಾಗಿ ನಮ್ಮ ಸಾಧನೆ ಸೀಮಿತವಾಗಿದೆ. ನಮ್ಮ ಪೌರಾಣಿಕ ಬರಹ, ಸಾವಿರಾರು ದೇವರುಗಳಿರುವುದು ಕೇವಲ ಪೂಜೆ, ಹಬ್ಬ ಹರಿದಿನಗಳ ಆಚರಣೆಗೆ ಅಲ್ಲ.
ದೀಪಾವಳಿ, ಯುಗಾದಿ ಹಬ್ಬ ಹರಿದಿನಗಳು, ಮಹಾನೀಯರ ಜಯಂತಿಗಳು ಕೇವಲ ಆಚರಣೆಗೆ ಸೀಮಿತವಲ್ಲ. ಮಹಾವಿಷ್ಣುವಿನ ದಶಾವತಾರ ಕೇವಲ ಪುರಾಣಕ್ಕೆ ಸೀಮಿತವಾಗಬಾರದು. ವಿಷ್ಣುವಿನ ಅವತಾರಗಳನ್ನು ನಮ್ಮ ನಿತ್ಯ ಅಗತ್ಯಕ್ಕೆ ಅನುಗುಣವಾಗಿ ಅಭಿವೃದ್ಧಿಗಾಗಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ನಮ್ಮಲ್ಲಿರುವ ಅಹಂಕಾರ ಎಂಬ ಬಲಿ ಚಕ್ರವರ್ತಿಯನ್ನು ನಿಯಂತ್ರಿಸಲು ಒಬ್ಬ ವಾಮನನ ಅಗತ್ಯವಿದ್ದಾನೆ. ನಮ್ಮ ಅರಿಷಡ್ವರ್ಗಗಳ ನಿಯಂತ್ರಣವಾಗಬೇಕು. ಕ್ಷತ್ರಿಯರ ಉಪಟಳ ಹೆಚ್ಚಳವಾದಾಗ ಅವತರಿಸಿದ ಪರಶುರಾಮನ ಅವತಾರ ನಮಗೆ ಮಾದರಿಯಾಗಬೇಕು. ಪುರಾಣ, ವೇದಗಳಲ್ಲಿ ಉಲ್ಲೇಖವಾಗಿರುವ ಯಾವುದೇ ವಸ್ತು-ವಿಷಯ ಕೇವಲ ಅಧ್ಯಯನಕ್ಕೆ ಮಾತ್ರ ಸೀಮಿತವಾಗಬಾರದು. ಅದನ್ನು ನಮ್ಮ ಅಗತ್ಯಕ್ಕೆ ತಕ್ಕಂತೆ ಮತ್ತು ಅಭಿವೃದ್ಧಿಗೆ ಬೇಕಾದಂತೆ ಬಳಸಿಕೊಂಡಾಗ ಮಾತ್ರ ನಾವು ಸಾಧನೆಯತ್ತ ಹೊರಳುತ್ತೇವೆ ಎಂದು ರವಿ ಚನ್ನಣ್ಣನವರ್​ ಹೇಳಿದರು. 

ಇದನ್ನೂ ನೋಡಿ: ಚಾಮುಂಡಿ ಬೆಟ್ಟದಲ್ಲಿ ಚಂಡಿಕಾ ಹೋಮ: ಹೆಚ್​.ಡಿ.ದೇವೇಗೌಡ ದಂಪತಿ ಭಾಗಿ

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.