ಚಾಮರಾಜನಗರದಲ್ಲಿ ಪದವೀಧರ ಮತದಾರರಿಗೆ ಭರ್ಜರಿ ಬಾಡೂಟ! - voters provided with good food before election in chamarajanagar
🎬 Watch Now: Feature Video

ಚಾಮರಾಜನಗರ: ವಿಧಾನ ಪರಿಷತ್ ಪ್ರವೇಶಿಸಲು ದಕ್ಷಿಣ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳು ಮತದಾರರಿಗೆ ಕಳೆದ ಮೂರು ದಿನಗಳಿಂದ ಭರ್ಜರಿ ಬಾಡೂಟ, ಮತ್ತು ಕೇಳಿದವರಿಗೆ ಮದ್ಯವನ್ನು ನೀಡಿದ್ದಾರೆ ಎನ್ನಲಾದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಖಾಸಗಿ ಹೋಟೆಲ್ ಹಾಗೂ ಯಳಂದೂರಿನ ತೋಟದ ಮನೆಯೊಂದರಲ್ಲಿ ನಡೆದ ಬಾಡೂಟದ ಮೇಲ್ವಿಚಾರಣೆಯನ್ನು ಒಂದು ಪಕ್ಷದ ಮುಖಂಡರು ನಡೆಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಬಾಡೂಟಕ್ಕೆ ಹೋದ ವ್ಯಕ್ತಿಯೊಬ್ಬರು ತೆಗೆದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಪ್ರಜ್ಞಾವಂತರು ಎನಿಸಿಕೊಂಡವರು ಈ ರೀತಿ ಆಮಿಷಕ್ಕೆ ಒಳಗಾದರೆ ಹೇಗೆ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
Last Updated : Feb 3, 2023, 8:23 PM IST