ಶೆಟ್ಟರ್ ಕ್ಷಮೆ ಕೇಳುವ ಪ್ರಮೇಯವೇ ಬಂದಿಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ - muslim reservation news
🎬 Watch Now: Feature Video
ಹುಬ್ಬಳ್ಳಿ: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಕ್ಷಮೆ ಕೇಳಿಲ್ಲ. ನಾವು ಕೇಳು ಅಂತ ಕೂಡ ಹೇಳಿಲ್ಲ. ಕ್ಷಮೆ ಕೇಳುವ ಪ್ರಮೇಯವೇ ಬಂದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ಸೋಮವಾರ ಕೇಂದ್ರ ಗೃಹ ಸಚಿವರ ಸಭೆಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಯಾವುದೇ ಕಾರಣಕ್ಕೂ ಕ್ಷಮಿಸಬೇಡಿ ಎಂಬಂತ ಮಾತು ಕೇಳಿ ಬಂದಿರುವ ಬೆನ್ನಲ್ಲೇ ಮಾಧ್ಯಮಗಳ ಪ್ರಶ್ನೆಗೆ ಅವರು ಪ್ರತಿಕ್ರಿಯೆ ನೀಡಿದರು. ಚುನಾವಣೆ ಗೆಲ್ಲಬೇಕು ಎಂಬ ನಿಟ್ಟಿನಲ್ಲಿ ಅಮಿತ್ ಶಾ ಅವರು ಆ ರೀತಿಯಲ್ಲಿ ಹೇಳಿದ್ದಾರೆ. ನಮ್ಮ ಗುರಿ ಒಂದೇ ಚುನಾವಣೆ ಗೆಲ್ಲಬೇಕು. ಶೆಟ್ಟರ್ ಕ್ಷಮೆಯ ಪ್ರಮೇಯವೇ ಬಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಮುಸ್ಲಿಂ ಮೀಸಲಾತಿ ಕುರಿತು ಸುಪ್ರೀಂಕೋರ್ಟ್ ವಿಚಾರಣೆ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವರು, ಈ ಕುರಿತು ಸಂಬಂಧಪಟ್ಟ ವಕೀಲರ ಜೊತೆಗೆ ಮಾತನಾಡಿದ್ದೇನೆ. ಯಾವುದೇ ರೀತಿಯಲ್ಲಿ ತಡೆಹಿಡಿದಿಲ್ಲ. ಇನ್ನೂ ಕೂಡ ವಿಚಾರಣೆ ಹಂತದಲ್ಲಿದೆ ಎಂದು ಹೇಳಿದ್ರು. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿಂದ ಬಿಜೆಪಿ ಅಭ್ಯರ್ಥಿಗಳು ಸೂಕ್ತ ಬಹುಮತದೊಂದಿಗೆ ಆರಿಸಿ ಬರುವ ಮೂಲಕ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರಲಿದೆ ಎಂದು ಭರವಸೆ ನೀಡಿದರು. ಕ್ಷೇತ್ರದಲ್ಲಿ ಮಹೇಶ್ ಟೆಂಗಿನಕಾಯಿ ಅವರು ಅಭೂತಪೂರ್ವ ಗೆಲುವನ್ನು ಸಾಧಿಸುತ್ತಾರೆ ಎಂದು ಜೋಶಿ ಭವಿಷ್ಯ ನುಡಿದರು.