ಅಬ್ಬಿ ಜಲಪಾತ ಪ್ರವೇಶ ದ್ವಾರ ಶುಲ್ಕಕ್ಕೆ ಮಾಲೀಕರಿಂದ ವಿರೋಧ
🎬 Watch Now: Feature Video
ಮಡಿಕೇರಿ: ಪ್ರಸಿದ್ಧ ಪ್ರವಾಸಿ ತಾಣವಾಗಿರುವ ಅಬ್ಬಿ ಜಲಪಾತ ನೋಡಲು ಬರುವ ಪ್ರವಾಸಿಗರಿಂದ ಕೆ.ನಿಡುಗಣೆ ಗ್ರಾಮ ಪಂಚಾಯತ್ ಟಿಕೆಟ್ ನಿಗದಿಪಡಿಸಿ ಶುಲ್ಕ ವಸೂಲಿ ಮಾಡುತ್ತಿರುವುದಕ್ಕೆ ಜಲಪಾತ ಇರುವ ತೋಟದ ಮಾಲೀಕರು ವಿರೋಧ ವ್ಯಕ್ತಪಡಿಸಿ ಟಿಕೆಟ್ ಕೌಂಟರ್ಗೆ ಬೀಗ ಹಾಕಿದ್ದಾರೆ. ತೋಟದ ಮಾಲೀಕರಾದ ನಿವೃತ್ತ ಎಸ್ಪಿ ಇಂದಿರಾ ಅವರು ಮಾಧ್ಯಮದ ಜೊತೆ ಮಾತನಾಡಿ, "ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿಗರಿಗೆ ಅವಕಾಶ ನೀಡುವ ಸಲುವಾಗಿ ಸ್ಥಳ ಬಿಟ್ಟುಕೊಡಲಾಗಿದೆ. ಈ ಮೊದಲು ಕಾಲು ದಾರಿಯಿತ್ತು. ನಂತರ ಐದು ಅಡಿ ಜಾಗದಲ್ಲಿ ಕಾಂಕ್ರಿಟ್ ಮೆಟ್ಟಿಲುಗಳನ್ನು ನಿರ್ಮಿಸಿ ಇಕ್ಕೆಲಗಳಲ್ಲಿ ನೆಟ್‌ನಿಂದ ಗ್ರಿಲ್ಸ್ ಅಳವಡಿಸಲಾಗಿದೆ."
"ಪ್ರವಾಸಿಗರ ವೀಕ್ಷಣೆಗೆ ಬಿಟ್ಟು ಕೊಟ್ಟ ಜಾಗವನ್ನು ದಾನ ಮಾಡಿದ ರೀತಿಯಲ್ಲಿ ಸ್ಥಳ ದಾನಿಗಳು ಎಂದು ನಾಮಫಲಕ ಹಾಕಿದ್ದಾರೆ. ಇದು ಯಾವ ನ್ಯಾಯ.? ತೋಟಕ್ಕೆ ಗೊಬ್ಬರ ಅಥವಾ ಇತರೆ ಯಾವುದೇ ವಸ್ತುಗಳ ಸಾಗಾಟಕ್ಕೆ ಕೆಲಸಗಾರರಿಗೆ ತೊಂದರೆ ಮಾಡುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಲಪಾತ ಪ್ರವೇಶದ ಟಿಕೆಟ್ ಕೌಂಟರ್ ಮುಚ್ಚಿ ಪ್ರವಾಸಿಗರಿಗೆ ಉಚಿತ ಪ್ರವೇಶಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿ ಬಳಿ ಮಠದ ಪೂಜೆ ವಿಚಾರಕ್ಕೆ ಗಲಾಟೆ: ಅರ್ಚಕನ ಮೇಲೆ ಹಲ್ಲೆ