ಹಾಡಹಗಲೇ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ - ಸಿಸಿಟಿವಿಯಲ್ಲಿ ದುಷ್ಕೃತ್ಯ ಸೆರೆ - ಟ್ವೀಟ್ ಮಾಡಿದ ಅಖಿಲೇಶ್ ಯಾದವ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17848175-thumbnail-4x3-jj.jpg)
ಪ್ರಯಾಗ್‌ರಾಜ್(ಉತ್ತರ ಪ್ರದೇಶ): ಧುಮನ್‌ಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ಸುಲೇಮ್ ಸರಾಯ್ ಪ್ರದೇಶದಲ್ಲಿ ಬಿಎಸ್‌ಪಿ ಶಾಸಕ ರಾಜುಪಾಲ್ ಹತ್ಯೆ ಪ್ರಕರಣದ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದುಷ್ಕರ್ಮಿಗಳು ಹೇಗೆ ಯೋಜಿತ ರೀತಿಯಲ್ಲಿ ಕೃತ್ಯ ಎಸಗಿದ್ದಾರೆ ಎಂಬುದು ವಿಡಿಯೋದಿಂದ ಸ್ಪಷ್ಟವಾಗಿ ತಿಳಿಯುತ್ತದೆ.
ಇದೇ ವೇಳೆ ಅಖಿಲೇಶ್ ಯಾದವ್ ಕೂಡ ಟ್ವೀಟ್ ಮಾಡುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಳಿ ವಾಹನದಲ್ಲಿ ಬಂದ ಮೂವರು ಕೆಳಗಿಳಿದಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡು ಬಂದಿದೆ. ಇದಾದ ನಂತರ, ರಾಜುಪಾಲ್ ಹತ್ಯೆ ಪ್ರಕರಣದ ಸಾಕ್ಷಿಗಳು ಮತ್ತು ಪೊಲೀಸರು ತಮ್ಮ ಕಾರಿನಿಂದ ಇಳಿಯುತ್ತಿರುವ ಸ್ಥಳಕ್ಕೆ ಆರೋಪಿಗಳು ಬರುವುದು ಕಾಣಿಸುತ್ತದೆ. ದಾಳಿಕೋರನು ಇಲ್ಲಿಗೆ ಬಂದ ತಕ್ಷಣವೇ ಉಮೇಶ್ ಪಾಲ್ ಮೇಲೆ ಗುಂಡು ಹಾರಿಸುತ್ತಾರೆ. ಇದರಿಂದಾಗಿ ಅವರು ನೆಲದ ಮೇಲೆ ಬೀಳುತ್ತಾರೆ. ಅದೇ ಸಮಯದಲ್ಲಿ, ಒಬ್ಬ ಪೊಲೀಸ್ ತಕ್ಷಣವೇ ಕೆಳಗೆ ಬೀಳುತ್ತಾರೆ. ಗುಂಡು ಹಾರಿಸಿದ ನಂತರ, ಕಪ್ಪು ಕೋಟ್ ಧರಿಸಿದ್ದ ಉಮೇಶ್ ಪಾಲ್ ತಮ್ಮ ಮನೆಯೊಳಗೆ ಓಡುತ್ತಾರೆ. ಅಲ್ಲಿಯವರೆಗೆ ಮೂವರು ಆರೋಪಿಗಳು ಗುಂಡು ಹಾರಿಸುತ್ತ ಅಂಗಡಿಯೊಳಗೆ ನುಗ್ಗುತ್ತಾರೆ.
ಅದೇ ವೇಳೆಗೆ ದುಷ್ಕರ್ಮಿಯೊಬ್ಬ ಬ್ಯಾಗ್‌ನಲ್ಲಿದ್ದ ಬಾಂಬ್ನ್ನು ಕಾರಿನ ಸುತ್ತ ಎಸೆಯುತ್ತಾನೆ. ಇದರಿಂದ ಸುತ್ತಲೂ ಹೊಗೆ ಹರಡುತ್ತದೆ. ಸ್ವಲ್ಪ ಸಮಯದಲ್ಲೇ ದಾಳಿಕೋರರೆಲ್ಲರೂ ಉಮೇಶ್ ಪಾಲ್ ಅವರ ಕಾರಿನಿಂದ ಹೊರಬಂದು ಕಾರಿನ ಮೇಲೆ ಮನಬಂದಂತೆ ಗುಂಡು ಹಾರಿಸುತ್ತಾರೆ. ಅದೇ ಸಮಯದಲ್ಲಿ, ಕೆಲವು ದಾಳಿಕೋರರು ಅಂಗಡಿಯೊಂದರಲ್ಲಿ ಏನೋ ಖರೀದಿಸುತ್ತಿರುವ ದೃಶ್ಯಗಳು ಕಂಡುಬರುತ್ತವೆ.
ಅವನ ಸಹಚರರು ದಾಳಿ ಪ್ರಾರಂಭಿಸಿದಾಗ, ಉಳಿದವರು ಅವರೊಂದಿಗೆ ಸೇರಿಕೊಳ್ಳುತ್ತಾರೆ. ಗುಂಡು ಹಾರಿಸುತ್ತಿರುವುದನ್ನು ನೋಡಿದ ಅಂಗಡಿಯವನು ತನ್ನ ಶಟರ್ ಅನ್ನು ಮುಚ್ಚುತ್ತಾನೆ. ವಿಡಿಯೋದಲ್ಲಿ ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿಯೊಬ್ಬ ಗುಂಡು ಹಾರಿಸುತ್ತಿರುವ ದೃಶ್ಯವೂ ಇದೆ. ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಈ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಸಾಫ್ಟ್ವೇರ್ ಗಂಡನ ಬಿಟ್ಟು ಪ್ರಿಯಕರನ ಹಿಂದೆ ಹೋದ ಪುತ್ರಿ.. ಮಗಳನ್ನು ಬರ್ಬರವಾಗಿ ಕೊಂದ ಅಪ್ಪ