ಎರಡು ಬಸ್, ಆಟೋ ರಿಕ್ಷಾದ ನಡುವೆ ಅಪಘಾತ: 25ಕ್ಕೂ ಹೆಚ್ಚು ಮಂದಿಗೆ ಗಾಯ - ಬಸ್ಸುಗಳ ನಡುವೆ ಡಿಕ್ಕಿ
🎬 Watch Now: Feature Video
Published : Nov 28, 2023, 7:09 PM IST
ಖೇಡಾ (ಗುಜರಾತ್): ಅಹಮದಾಬಾದ್-ಇಂದೋರ್ ಹೆದ್ದಾರಿಯಲ್ಲಿ ಎರಡು ಟೂರಿಸ್ಟ್ ಬಸ್ ಹಾಗೂ ಆಟೋ ರಿಕ್ಷಾದ ನಡುವೆ ಸಂಭವಿಸಿದ ಅಪಘಾತದಲ್ಲಿ 25ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಗಲತೇಶ್ವರದ ಮನ್ಪುರ್ ಬಳಿ ಇಂದು ಮುಂಜಾನೆ ನಡೆದಿದೆ. ತಕ್ಷಣ ಗಾಯಾಳುಗಳನ್ನು ಸ್ಥಳೀಯರು ಆಂಬ್ಯುಲೆನ್ಸ್ ಮೂಲಕ ಅಹಮದಾಬಾದ್ ಮತ್ತು ಗೋಧ್ರಾ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನಿಸಿದ್ದಾರೆ.
ಇಂದು ಮುಂಜಾನೆ ಗಲತೇಶ್ವರ್ ತಾಲೂಕಿನ ಮನ್ಪುರ್ ಬಳಿಯ ಅಹಮದಾಬಾದ್-ಇಂದೋರ್ ಹೆದ್ದಾರಿಯಲ್ಲಿ ಎರಡು ಟೂರಿಸ್ಟ್ ಬಸ್ಸುಗಳ ನಡುವೆ ಡಿಕ್ಕಿ ಸಂಭವಿಸಿದೆ. ಡಿಕ್ಕಿಯಾದ ರಭಸಕ್ಕೆ ಬಸ್ಸೊಂದು ಪಲ್ಟಿಯಾಗಿದೆ. ಈ ವೇಳೆ ಆಟೋ ರಿಕ್ಷಾಕ್ಕೂ ಅಪಘಾತವಾಗಿದೆ. ಪಲ್ಟಿಯಾಗಿದ್ದ ಬಸ್ ಅನ್ನು ಜೆಸಿಬಿ ಸಹಾಯದಿಂದ ಮೇಲೆತ್ತಲಾಗಿದೆ. ಇದರಲ್ಲಿ ಒಂದು ಟೂರಿಸ್ಟ್ ಬಸ್ ಅಹಮದಾಬಾದ್ನ ನರೋಡಾದಿಂದ ಉಜ್ಜಯಿನಿಗೆ ಹಿಂದಿರುಗುತ್ತಿತ್ತು. ಮತ್ತೊಂದು ಟೂರಿಸ್ಟ್ ಬಸ್ ಮಧ್ಯಪ್ರದೇಶದಿಂದ ಜಮ್ ಜೋಧಪುರಕ್ಕೆ ಹೋಗುತ್ತಿತ್ತು.
ಇದನ್ನೂ ಓದಿ: ಎರಡು ಟ್ರಕ್ಗಳ ನಡುವೆ ಮುಖಾಮುಖಿ ಡಿಕ್ಕಿ.. ಡ್ರೈವರ್, ಕ್ಲೀನರ್ ಸಜೀವದಹನ
ರಾಜಸ್ಥಾನದಲ್ಲಿ ಬಸ್ ಅಪಘಾತ: ಇತ್ತೀಚಿಗೆ, ರಾಜಸ್ಥಾನದ ರಾಷ್ಟ್ರೀಯ ಹೆದ್ದಾರಿ 21ರಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ದುರಂತದಲ್ಲಿ ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸುಮಾರು 24 ಪ್ರಯಾಣಿಕರು ಗಾಯಗೊಂಡಿದ್ದರು. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು.