Chanrdarayan-3 Mission: ಚಂದ್ರನ ಅನ್ವೇಷಣೆಯಲ್ಲಿ ಭಾರತ ಸಕ್ರಿಯ ಆಟಗಾರನಾಗಿರಬೇಕು: ಇಸ್ರೋ ಮಾಜಿ ವಿಜ್ಞಾನಿ - ಚಂದ್ರಯಾನ
🎬 Watch Now: Feature Video
ಚನ್ನೈ (ತಮಿಳುನಾಡು): ''ಮುಂದಿನ ದಿನಗಳಲ್ಲಿ ಚಂದ್ರನ ಮೇಲೆ ವಸಾಹತುಗಳನ್ನು ಸ್ಥಾಪಿಸಿವುದು ಹಾಗೂ ಚಂದ್ರನ ಮೇಲೆ ಬಾಹ್ಯಾಕಾಶ ಕೇಂದ್ರಗಳನ್ನು ಸ್ಥಾಪಿಸುವುದು ಅನಿವಾರ್ಯವಾದರೆ, ಭಾರತವು ಹಿಂದೆ ಬೀಳಬಾರದು. ದೇಶವು ಅಂತಹ ಪ್ರಯತ್ನಗಳ ಭಾಗವಾಗಬೇಕು. ಚಂದ್ರಯಾನ ಸರಣಿಯು ಮಾನವ ಸಹಿತ ಚಂದ್ರನ ಕಾರ್ಯಾಚರಣೆಗಳಿಗೆ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಈ ದಿಕ್ಕಿನಲ್ಲಿ ಪ್ರಸ್ತುತ ಚಂದ್ರಯಾನ -3 ಮಿಷನ್ ಒಂದು ಹೆಜ್ಜೆಯಾಗಿದೆ'' ಎಂದು ಇಸ್ರೋದ ಮಾಜಿ ವಿಜ್ಞಾನಿ ಮೈಸಾಮಿ ಅಣ್ಣಾದೊರೈ ಹೇಳಿದರು.
ಚಂದ್ರಯಾನ ಮತ್ತು ಮಂಗಳಯಾನ ಮಿಷನ್‌ಗಳ ಹಿಂದಿನ ವ್ಯಕ್ತಿ, ಇಸ್ರೋ ಮಾಜಿ ವಿಜ್ಞಾನಿ ಮೈಸಾಮಿ ಅಣ್ಣಾದೊರೈ ಈಟಿವಿ ಭಾರತಗೆ ವಿಶೇಷ ಸಂದರ್ಶನದಲ್ಲಿ ನೀಡಿದರು. ''ಚಂದ್ರಯಾನ ಸರಣಿಯು ಭಾರತದ ತಂತ್ರಜ್ಞಾನ ಪ್ರದರ್ಶನಕಾರರೆಂದು ಬಣ್ಣಿಸಿದರು. ಚಂದ್ರಯಾನ ಸರಣಿಯನ್ನು ಕೈಗೊಳ್ಳುವಲ್ಲಿ, ಭಾರತವು ಮಾನವ ಸಹಿತ ಚಂದ್ರನ ಕಾರ್ಯಾಚರಣೆಗಳಿಗೆ ಒಂದು ಹೆಜ್ಜೆ ಹತ್ತಿರವಾಗುವುದು. ಜೊತೆಗೆ ನೀರು ಮತ್ತು ಖನಿಜ ಸಂಪನ್ಮೂಲಗಳ ಲಭ್ಯತೆಯ ಬಗ್ಗೆ ಹೆಚ್ಚು ಅನ್ವೇಷಿಸುವ ವ್ಯಾಪ್ತಿಯನ್ನೂ ವಿಸ್ತರಿಸುತ್ತದೆ. ಪ್ರಸ್ತುತ ಇಳಿಯುವಿಕೆಯನ್ನು ಯೋಜಿಸಲಾಗಿರುವ ಚಂದ್ರನ ದಕ್ಷಿಣ ಧ್ರುವವು ದೊಡ್ಡ ವೈಜ್ಞಾನಿಕ ಮತ್ತು ಕಾರ್ಯತಂತ್ರದ ಮೌಲ್ಯವನ್ನು ಹೊಂದಿದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ಮಿಷನ್ ಆಯ್ಕೆ ಮಾಡಲಾಗಿದೆ'' ಎಂದರು.
''ಉಡಾವಣಾ ವಾಹಕವು ಭೂಮಿಯನ್ನು ಪರಿಭ್ರಮಿಸುವ ಮತ್ತು ನಂತರ ಚಂದ್ರನ ಮೇಲ್ಮೈಯನ್ನು ತಲುಪಲು ಒಂದು ತಿಂಗಳಿಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುವ ಕುಶಲತೆಯ ಮೂಲಕ ಚಂದ್ರನ ಕಕ್ಷೆಗೆ ಸೇರಿಸುವ ಯಶಸ್ವಿ ವಿಧಾನವಾಗಿದೆ. ಮಂಗಳಯಾನ ಮಿಷನ್‌ನಲ್ಲಿಯೂ ಇದನ್ನು ಬಳಸಲಾಗಿತ್ತು. ಚಂದ್ರನ ಮೇಲೆ ಇಳಿಯಲು ಮತ್ತು ಭೂಮಿಗೆ ಮರಳಲು ಕೇವಲ 8 ದಿನಗಳನ್ನು ತೆಗೆದುಕೊಂಡ ಯುನೈಟೆಡ್ ಸ್ಟೇಟ್ಸ್‌ನ ಅಪೊಲೊ ಸರಣಿಗಿಂತ ಭಿನ್ನವಾಗಿದೆ'' ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಭಾರತೀಯರ ಆಶಯವನ್ನು ಚಂದ್ರನತ್ತ ಹೊತ್ತು ಸಾಗಿದ ಉಪಗ್ರಹ.. ಇಸ್ರೋಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ, ಕೇಂದ್ರ ಸಚಿವ