ಮೈಶುಗರ್ ಕಾರ್ಖಾನೆ ಅಧಿಕಾರಿಗಳೊಂದಿಗೆ ಶಾಸಕ ರವಿಕುಮಾರ್ ಸಭೆ.. ಶೀಘ್ರದಲ್ಲಿ ಕಬ್ಬು ಅರೆಯುವಿಕೆ ಆರಂಭಿಸುವಂತೆ ಸೂಚನೆ
🎬 Watch Now: Feature Video
ಮಂಡ್ಯ: ಮೈಶುಗರ್ ಕಾರ್ಖಾನೆಗೆ ಮಂಡ್ಯ ಶಾಸಕ ಗಣಿಗ ರವಿಕುಮಾರ್ ಇಂದು ದಿಢೀರ್ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ನಷ್ಟದ ಸುಳಿಗೆ ಸಿಲುಕಿದ್ದ ಮೈಶುಗರ್ ಕಾರ್ಖಾನೆಯನ್ನ ಕಳೆದ ವರ್ಷದ ಬಿಜೆಪಿ ಸರ್ಕಾರ ಪುನಾರಂಭಿಸಿತ್ತು. ಆದ್ರೆ ಅದು ಕೂಡ ಯಶಸ್ವಿಯಾಗಿರಲಿಲ್ಲ. ಇನ್ನು ಇತ್ತಿಚೆಗಷ್ಟೇ ನೂತನ ರಾಜ್ಯ ಕಾಂಗ್ರೆಸ್ ಸರ್ಕಾರ ರಚನೆಯಾದ ಬೆನ್ನಲ್ಲೇ 50 ಕೋಟಿ ರೂ. ಅನುದಾನ ನೀಡಿ ಕಾರ್ಖಾನೆ ಆರಂಭಕ್ಕೆ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ನೇತೃತ್ವದಲ್ಲಿ ಪೂಜೆ ಕೂಡ ಸಲ್ಲಿಸಲಾಯಿತು. ಇನ್ನು ಕೆಲವೇ ದಿನಗಳಲ್ಲಿ ಕಾರ್ಖಾನೆ ಆರಂಭವಾಗಲಿದ್ದು, ಆ ಹಿನ್ನೆಲೆ ಮಂಡ್ಯ ಶಾಸಕ ರವಿಕುಮಾರ್ ಮೈಶುಗರ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಾಸಕ ಕಬ್ಬು ಅರೆಯುವಿಕೆ ಕಾರ್ಯದ ಬಗ್ಗೆ ಮೈಶುಗರ್ ಎಂಡಿ ಅಪ್ಪಾಸಾಹೇಬ್ ಪಾಟೀಲ ಬಳಿ ಮಾಹಿತಿ ಪಡೆದ ಅವರು, ನಿಗದಿತ ಸಮಯಕ್ಕೆ ಕಬ್ಬು ಅರೆಯುವಿಕೆ ಕಾರ್ಯ ಪ್ರಾರಂಭವಾಗುವಂತೆ ನೋಡಿಕೊಳ್ಳಿ, ಅದಕ್ಕಿಂತ ಮುಖ್ಯವಾಗಿ ಮೈಶುಗರ್ ವ್ಯಾಪ್ತಿ ಹಾಗೂ ಒಪ್ಪಂದವಾಗಿರುವ ಕಬ್ಬು ಬೇರೆ ಕಾರ್ಖಾನೆಗೆ ಹೋಗದಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಇದನ್ನೂಓದಿ:Power cut: ನಿಯಮ ಪಾಲಿಸದೆ ಮನೆಯ ವಿದ್ಯುತ್ ಸಂಪರ್ಕ ಕಡಿತ : ಬೆಸ್ಕಾಂಗೆ 25 ಸಾವಿರ ರೂ. ದಂಡ