ಏಣಿ ಹತ್ತಿ ಶಾಲೆ ಮೇಲೇರಿದ ಶಾಸಕ.. ಶಿಥಿಲಾವಸ್ಥೆಯ ಶಾಲೆಗೆ ಪಟಾಪಟ್ ಕಾಯಕಲ್ಪ! - ಶಿಥಿಲ ಶಾಲೆಗೆ ಪಟಾಪಟ್ ಕಾಯಕಲ್ಪ
🎬 Watch Now: Feature Video
Published : Aug 24, 2023, 4:49 PM IST
ಚಾಮರಾಜನಗರ: ಎಷ್ಟೋ ಬಾರಿ ಶಾಲೆ, ಕಚೇರಿಗಳು ಶಿಥಿಲಾವಸ್ಥೆ ತಲುಪಿ ವರ್ಷಗಳೇ ಕಳೆದರೂ ಅವುಗಳ ದುರಸ್ತಿಗೆ ಮನವಿ ಮಾಡಿದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಶೀಘ್ರವಾಗಿ ಸ್ಪಂದಿಸುವುದಿಲ್ಲ. ಆದ್ರೆ ಶಾಲೆ ಶಿಥಿಲಗೊಂಡಿದೆ ಎಂದು ಮುಖ್ಯ ಶಿಕ್ಷಕ ದೂರವಾಣಿ ಕರೆ ಮಾಡಿದ ಬೆನ್ನಲ್ಲೇ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಏಣಿ ಏರಿ ಪರಿಸ್ಥಿತಿ ಅವಲೋಕಿಸಿ, ಕೂಡಲೇ ರಿಪೇರಿಗೆ ಸೂಚನೆ ಕೊಟ್ಟ ಘಟನೆ ಚಾಮರಾಜನಗರ ತಾಲೂಕಿನ ಚಂದಕವಾಡಿ ಗ್ರಾಮದಲ್ಲಿ ನಡೆದಿದೆ.
ಚಂದಕವಾಡಿ ಪಬ್ಲಿಕ್ ಶಾಲೆಯ ಹಲವು ಕೊಠಡಿಗಳು ಶಿಥಿಲಗೊಂಡ ಮಾಹಿತಿ ಅರಿತ ಶಾಸಕ ಪುಟ್ಟರಂಗಶೆಟ್ಟಿ ಇಂದು ಭೇಟಿ ಕೊಟ್ಟು, ಶಾಲೆಗಳ ಕೊಠಡಿ ಪರಿಶೀಲನೆ ನಡೆಸಿದರು. ತಾರಸಿ ಹೇಗಿದೆ..? ಎಂಬುದನ್ನು ಅರಿಯುವ ಸಲುವಾಗಿ ಏಣಿಯೊಂದನ್ನು ತರಿಸಿದ ಶಾಸಕರು, ಶಾಲೆ ಮೇಲೇರಿ ಎಲ್ಲವನ್ನೂ ಕಂಡು ಅನುದಾನ ಕೊಡುತ್ತೇನೆ. ಶುಕ್ರವಾರ (ಆ.25) ರಿಂದಲೇ ಕಾಮಗಾರಿ ಆರಂಭಿಸಿ ಎಂದು ಪಟಾಪಟ್ ಕಾಯಕಲ್ಪ ಕೊಟ್ಟು ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: ಚಾಮರಾಜನಗರ: ಉರುಳಿದ ಬೃಹತ್ ಮರ, ಸ್ವಲ್ಪದರಲ್ಲೇ ಪಾರಾದ ಶಾಸಕ
ಶಾಲಾ ಕೊಠಡಿಗಳು ಸೋರುತ್ತಿವೆ ಎಂದು ಶಿಕ್ಷಕರು ಹತ್ತಾರು ಬಾರಿ ಮನವಿ ಮಾಡಿದರೂ ಅನುದಾನವಿಲ್ಲ ಎನ್ನುವ ಶಾಸಕರ ಮಧ್ಯೆ ಭೇಟಿ ಕೊಟ್ಟ ಕೂಡಲೇ ಕಾಮಗಾರಿ ಆದೇಶ ಕೊಟ್ಟಿದ್ದು, ಗಮನಾರ್ಹವಾಗಿದೆ.