ಸ್ವಪಕ್ಷೀಯರ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿದ ಶಾಸಕ ಯತ್ನಾಳ್ - ವಿಜಯೇಂದ್ರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ
🎬 Watch Now: Feature Video
Published : Dec 2, 2023, 8:36 PM IST
ವಿಜಯಪುರ : ಮಾಜಿ ಸಿಎಂ ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಆನಂದ ನಗರದಲ್ಲಿ ಶುಕ್ರವಾರ ರಾತ್ರಿ ನಡೆದ ದಾನಮ್ಮದೇವಿ ಜಾತ್ರಾ ಮಹೋತ್ಸವದಲ್ಲಿ ಭಾಷಣ ಮಾಡುವ ವೇಳೆ ವಿಜಯೇಂದ್ರ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ ಅವರು, ಹಿಂದೆ ಅಪ್ಪ ಮಗ ನೀವು ನಾಟಕ ಮಾಡಬ್ಯಾಡ್ರಿ ಅಂತ ಹೇಳಿದ್ದೆ ಎಂದು ಹೇಳಿದರು.
ನಿಮ್ಮ ಮಂತ್ರಿ ಸ್ಥಾನ ತಗೊಂಡು ಏನ್ಮಾಡೋದು. ಈಗ ಮಂತ್ರಿ ಆಗಿ ಕುಳಿತಿದ್ದಾರೆ. ಈಗ ನಿಕಟಪೂರ್ವ ಅಂತ ಇಟ್ಟುಕೊಳ್ತಾರೆ. ಮಾಜಿ ಅಂತ ಇಟ್ಟುಕೊಂಡ್ರೆ ಏನಾಗುತ್ತದೆ. ನಿಕಟಪೂರ್ವ ಎಂದು ಬಂದಿದ್ದು ಇವರಿಂದ. ಮೊದಲು ಮಾಜಿ ಮುಖ್ಯಮಂತ್ರಿ ಎಂದು ಹೇಳುತ್ತಿದ್ರು. ಮುಖಭಂಗ ಆಗುತ್ತೆ ಅಂತ ನಿಕಟಪೂರ್ವ ಅಂತ ಕರೆಯಲಾಯಿತು. ಯಾಕಂದ್ರೆ ಆ ಕುರ್ಚಿ ಬಿಡಬಾರದು ಅಂತ ಟೀಕಿಸಿದರು.
ರೈತರ ಬಗ್ಗೆ ಕಣ್ಣೀರು ಹಾಕೋದು ನೋಡ್ಬಿಟ್ಟರೆ, ಎಲ್ಲಾ ನಾಟಕ ಮಾಡೋದು. ಎಲ್ಲಾ ಹುದ್ದೆ ತಮ್ಮ ಮಕ್ಕಳಿಗೆ ಬೇಕು. ಇನ್ನು ಏನಾದರೂ ಉಳಿದಿದ್ರೆ ಅದನ್ನು ಕೊಟ್ಟು ಬಿಡಿ ಅಂತ ಮೊನ್ನೆ ಹೇಳಿದ್ದೇನೆ. ಇದಕ್ಕೆಲ್ಲ ನಾನು ಅಂಜುವುದಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಇದನ್ನೂ ಓದಿ : ಶಾಸಕ ಶರತ್ ಬಚ್ಚೇಗೌಡ ಹುಟ್ಟುಹಬ್ಬದ ಆಚರಣೆ : ಹೂವಿನ ಜೊತೆ ನೋಟುಗಳ ಮಳೆ ಸುರಿಸಿದ ಅಭಿಮಾನಿಗಳು