ಬೆಳಗಾವಿ ಜಿಲ್ಲಾಸ್ಪತ್ರೆ ಲಿಫ್ಟ್ನಲ್ಲಿ ಸಿಲುಕಿದ ಸತೀಶ್ ಜಾರಕಿಹೊಳಿ ಪುತ್ರ - ಜಿಲ್ಲಾಸ್ಪತ್ರೆಯ ಲಿಫ್ಟ್
🎬 Watch Now: Feature Video
ಬೆಳಗಾವಿ : ಸಚಿವ ಸತೀಶ್ ಜಾರಕಿಹೊಳಿ ಅವರ ಪುತ್ರ ರಾಹುಲ್ ಜಾರಕಿಹೊಳಿ ಇಲ್ಲಿನ ಜಿಲ್ಲಾಸ್ಪತ್ರೆಯ ಲಿಫ್ಟ್ನಲ್ಲಿ ಸಿಲುಕಿದ ಘಟನೆ ಇಂದು ನಡೆಯಿತು. ಸುಮಾರು 15 ನಿಮಿಷಗಳ ಲಿಫ್ಟ್‌ನೊಳಗೆ ಸಿಲುಕಿದ್ದು, ಆಸ್ಪತ್ರೆ ಸಿಬ್ಬಂದಿ ಲಿಫ್ಟ್ ಸರಿಪಡಿಸಿದ ನಂತರ ರಾಹುಲ್ ಹೊರಬಂದರು.
ನಾಗರ ಪಂಚಮಿ ಹಾಗೂ ಬಸವ ಪಂಚಮಿ ನಿಮಿತ್ತ ಮಾನವ ಬಂಧುತ್ವ ವೇದಿಕೆ ಹಾಗೂ ಜಾರಕಿಹೊಳಿ ಫೌಂಡೇಶನ್ ವತಿಯಿಂದ ರೋಗಿಗಳಿಗೆ ಹಾಲು, ಹಣ್ಣು-ಹಂಪಲು ವಿತರಿಸಲು ರಾಹುಲ್ ಜಾರಕಿಹೊಳಿ ಜಿಲ್ಲಾಸ್ಪತ್ರೆಗೆ ಬಂದಿದ್ದರು. ಅವರೊಂದಿಗೆ ಇತರೆ 17 ಜನರು ಲಿಫ್ಟ್ನಲ್ಲಿ ಸಿಲುಕಿಕೊಂಡಿದ್ದರು. ಇದರಿಂದಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಎಚ್ಚೆತ್ತ ಜಿಲ್ಲಾಸ್ಪತ್ರೆಯ ಸಿಬ್ಬಂದಿ ಲಿಫ್ಟ್ ಸರಿಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ರಾಹುಲ್ ಜಾರಕಿಹೊಳಿ, ಬಡ ರೋಗಿಗಳಿಗೆ ನಾಗರ ಪಂಚಮಿಯಂದು ಪ್ರತಿ ವರ್ಷ ಹಾಲು, ಹಣ್ಣು-ಹಂಪಲು ವಿತರಿಸುತ್ತೇವೆ. ಹೀಗೆ ಬಂದಾಗ ಲಿಫ್ಟ್ನಲ್ಲಿ ಕೆಲಕಾಲ ಸಿಲುಕಿದ್ದೆವು. ಯಾರೂ ಆತಂಕಪಡುವ ಅಗತ್ಯ ಇಲ್ಲ. ಯಾವುದೇ ರೀತಿಯ ತೊಂದರೆ ಆಗಿಲ್ಲ ಎಂದು ಹೇಳಿದರು.
ಇದನ್ನೂ ಓದಿ : ಧಾರವಾಡ: ಶಾಲಾ ಮಕ್ಕಳಿಂದ ನಾಗರ ಪಂಚಮಿ ಆಚರಣೆ.. ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ವಿದ್ಯಾರ್ಥಿಗಳು