ಪ್ರಧಾನಿ ಮೋದಿ ಇಷ್ಟು ಬೇಗ ಹೆದರಿದರೆ ಹೇಗೆ..? ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನೆ - ಕಾಂಗ್ರೆಸ್ ಪಕ್ಷದ ತ್ಯಾಗ ಬಲಿದಾನ
🎬 Watch Now: Feature Video
Published : Sep 6, 2023, 8:54 PM IST
ಬೆಳಗಾವಿ: 'ಇಂಡಿಯಾ' ಎಂದು ವಿರೋಧ ಪಕ್ಷಗಳು ಹೆಸರು ಇಟ್ಟುಕೊಂಡಿದ್ದಕ್ಕೆ ಮೋದಿಗೆ ಇಷ್ಟು ಬೇಗ ಹೆದರಿಕೆ ಶುರುವಾಗಿದೆ. ಬಹಳ ದೊಡ್ಡ ನಾಯಕತ್ವ ಹೊಂದಿರುವ ಪ್ರಧಾನಿ ಮೋದಿ ಅವರು ಕೂಡ ಇಷ್ಟಕ್ಕೆ ಹೆದರಿ ಬಿಟ್ಟರೆ ಹೇಗೆ? ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಭಾರತ ಹೆಸರಿನ ದೇಶಕ್ಕೆ ನಾವು ಯಾರು ವಿರೋಧ ಮಾಡಿಲ್ಲ.ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಕಾಂಗ್ರೆಸ್ ಹೋರಾಟ ಮಾಡಿದೆ. ಕಾಂಗ್ರೆಸ್ ಎನ್ನುವ ಒಂದು ಪಕ್ಷ ಕಟ್ಟಿ ದೇಶಕ್ಕೆ ಭಾರತ ಅಂತಾ ಹೆಸರು ಇಟ್ಟಿದ್ದಾರೆ. ಇವರು ಏನೇನು ಬದಲಾವಣೆ ಮಾಡುತ್ತಾರೆ ಎಂದು ಕೇಂದ್ರ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸಿದರು.
ಮುಂದುವರಿದು ಮಾತನಾಡಿದ ಅವರು, ಹತ್ತು ರೂಪಾಯಿ ಮೇಲೆ ಏನಂತ ಬರೆದಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಂದು ನೋಟಿನ ಮೇಲೆ ಬರೆದಿದ್ದಾರೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎನ್ನುವ ಹೆಸರನ್ನು ಬದಲಾಯಿಸುತ್ತಾರಾ? ನಾವ್ಯಾರು ಭಾರತದ ಹೆಸರಿಗೆ ವಿರೋಧ ಮಾಡಿದ್ದೇವೆ ಎಂದು ಮಾಧ್ಯಮಗಳ ವಿರುದ್ಧ ಗರಂ ಆದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಇನ್ಮುಂದೆ ಇಂತಹ ಪ್ರಶ್ನೆಗಳನ್ನು ಕೇಳಬೇಡಿ, ಭಾರತ ದೇಶ ಈ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಪಕ್ಷದ ತ್ಯಾಗ ಬಲಿದಾನವಿದೆ ಎಂದರು.
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಶಾಂತಿ ನೆಲಸಬೇಕು ಎಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ಮಾಡಿದರು. ಇಂದಿಗೆ ಭಾರತ್ ಜೋಡೋ ಯಾತ್ರೆಗೆ ಒಂದು ವರ್ಷವಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸಂತಸ ವ್ಯಕ್ತಪಡಿಸಿದರು.