ಗೃಹ ಲಕ್ಷ್ಮಿ ಯೋಜನೆ ಕಾರ್ಯಕ್ರಮ ಕಾಂಗ್ರೆಸ್​ನ ಶಕ್ತಿ ಪ್ರದರ್ಶನ ಅಲ್ಲ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ - Gruha Lakshmi scheme inauguration program

🎬 Watch Now: Feature Video

thumbnail

By ETV Bharat Karnataka Team

Published : Aug 26, 2023, 6:08 PM IST

ಮೈಸೂರು: ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮದ ತಯಾರಿ ತುಂಬಾ ಜೋರಾಗಿ ನಡೆಯುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಹೇಳಿದರು. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಯರಲ್ಲಿ ಉತ್ಸಾಹ ತುಂಬಿದೆ. ಕೇವಲ 15 ದಿನಗಳಲ್ಲಿ ಯಾರಿಗೂ ಏನು ತೊಂದರೆಯಾಗದೆ 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಆಗಸ್ಟ್​ 30ರ ಕಾರ್ಯಕ್ರಮಕ್ಕೆ ಸನ್ನದ್ಧರಾಗಿದ್ದೇವೆ ಎಂದು ತಿಳಿಸಿದರು.

ಗೃಹ ಲಕ್ಷ್ಮಿ ಯೋಜನೆಯ ಸರ್ಕಾರಿ ಕಾರ್ಯಕ್ರಮ ಕಾಂಗ್ರೆಸ್​ನ ಶಕ್ತಿ ಪ್ರದರ್ಶನವೆಂಬಂತ್ತಿದೆ ಎಂಬ ಚರ್ಚೆಗಳು ನಡೆಯುತ್ತಿವೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಇದು ಕಾಂಗ್ರೆಸ್​ ಕೊಟ್ಟಂತಹ ಗ್ಯಾರಂಟಿಗಳ ಅನುಷ್ಠಾನ, ಕಾಂಗ್ರೆಸ್​ನ ಶಕ್ತಿ ಪ್ರದರ್ಶನ ಅಲ್ಲ. ಕರ್ನಾಟಕ ರಾಜ್ಯದ ಮಹಿಳೆಯರ ಆರ್ಥಿಕ ಶಕ್ತಿ ಪ್ರದರ್ಶನ ಎಂದರು. ರಾಹುಲ್ ಗಾಂಧಿಯವರು ಬರುತ್ತಿರುವುದಕ್ಕೆ ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಲಾಗಿದೆ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ರಾಹುಲ್​ ಗಾಂಧಿಯವರು ಗೃಹ ಜ್ಯೋತಿ ಮತ್ತು ಯುವ ನಿಧಿ ಗ್ಯಾರಂಟಿಗಳ ಘೋಷಣೆಗೆ ಬಂದಿದ್ದರು. ಗೃಹ ಲಕ್ಷ್ಮಿ ಗ್ಯಾರಂಟಿ ಘೋಷಣೆಗೆ ಪ್ರಿಯಾಂಕಾ ಗಾಂಧಿ ಬಂದಿದ್ದರು. ಈಗ ಅನುಷ್ಠಾನ ಮಾಡುವ ಕಾರ್ಯಕ್ರಮದಲ್ಲಿ ನಮ್ಮ ನಾಯಕರನ್ನು ಕರೆದು ಗೌರವ ಕೊಡುವುದು ನಮ್ಮ ಕರ್ತವ್ಯ ಎಂದು ಹೇಳಿದರು.

ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರಕ್ಕೆ ಶತದಿನದ ಸಂಭ್ರಮ.. ಪಂಚ ಗ್ಯಾರಂಟಿ ಕೇಂದ್ರಿತ ಆಡಳಿತದಲ್ಲಿ ಕರ್ನಾಟಕ ಮಾದರಿ ಮಂತ್ರ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.