ಆಮೆ ಉಳಿಸಲು ಹೋದ ಇಬ್ಬರು ಕೃಷಿ ಕಾರ್ಮಿಕರು ಸಾವು..! - ಕೃಷಿ ಕಾರ್ಯ ಚುರುಕು

🎬 Watch Now: Feature Video

thumbnail

By

Published : Jul 26, 2023, 5:21 PM IST

ಲಖಾನಿ (ಮಹಾರಾಷ್ಟ್ರ): ಒಂದು ಆಮೆಯನ್ನು ಉಳಿಸಲು ಹೋಗಿ ಇಬ್ಬರು ಕೃಷಿ ಕಾರ್ಮಿಕರು ಸಾವನ್ನಪ್ಪಿದ ದುರದೃಷ್ಟಕರ ಘಟನೆ ಭಂಡಾರಾ ಜಿಲ್ಲೆಯ ಲಖಾನಿ ತಾಲೂಕಿನಲ್ಲಿ ನಡೆದಿದೆ. ಆದರೆ, ಸ್ಥಳದಲ್ಲಿದ್ದ ಇತರ ಮಹಿಳಾ ರೈತ ಕಾರ್ಮಿಕರು ಎಚ್ಚರಿಕೆ ವಹಿಸಿದ್ದರಿಂದ ಒಬ್ಬ ಕೂಲಿ ಕಾರ್ಮಿಕನ ಪ್ರಾಣ ಉಳಿಯಿತು. 40 ವರ್ಷ ವಯಸ್ಸಿನ ಮಂಗೇಶ್ ಜೈಗೋಪಾಲ್ ಗೊಂಧುಲೆ ಮತ್ತು 38 ವರ್ಷ ವಯಸ್ಸಿನ ದಯಾರಾಮ್ ಸೋನಿರಾಮ್ ಭೋಂಡೆ ಮೃತಪಟ್ಟವರು. ಬದುಕುಳಿದ ಯುವಕನ ಹೆಸರು ಸುಧೀರ್ ಮೋರೇಶ್ವರ ಹಜಾರೆ ವಯಸ್ಸು 35.

ಕಳೆದ ಎಂಟು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಕೃಷಿ ಕಾರ್ಯ ಚುರುಕುಗೊಂಡಿದೆ. ಆದರೆ, ದಿಢೀರ್ ಕೃಷಿ ಕಾರ್ಯಗಳು ಆರಂಭವಾಗಿರುವುದರಿಂದ ಕೂಲಿ ಕಾರ್ಮಿಕರ ಕೊರತೆ ಎದುರಾಗಿದೆ. ಹೀಗಾಗಿ ರೈತರು ಸಿಕ್ಕ ಹಳ್ಳಿಗಳಿಂದಲೇ ಕೂಲಿಕಾರರನ್ನು ಕರೆದುಕೊಂಡು ಬರಬೇಕಾಗುತ್ತದೆ. ಲಖಾನಿ ತಾಲೂಕಿನ ಗರ್ಪೇಂದ್ರಿಯ ರೈತ ಅಶೋಕ ಗೈಧನೆ ಅವರು, ಲಖನಿ ತಾಲೂಕಿನ ಭುಗಾಂವ್ ಮೆಂಧಾ ಎಂಬಲ್ಲಿಂದ ಸುಮಾರು ಹದಿನೈದು ಪುರುಷರು ಹಾಗೂ ಮಹಿಳೆಯರನ್ನು ತಮ್ಮ ಸ್ವಂತ ಹೊಲದಲ್ಲಿ ನಾಟಿ ಕಾರ್ಯ ಮಾಡಲು ಕರೆತಂದಿದ್ದರು.

ಬಾವಿಯಲ್ಲಿ ಉಸಿರುಗಟ್ಟಿ ಇಬ್ಬರು ಸಾವು: ಬುಧವಾರ ಬೆಳಗ್ಗೆಯಿಂದ ಗದ್ದೆಯಲ್ಲಿ ನಾಟಿ ಕಾರ್ಯ ಆರಂಭವಾಯಿತು. ಮಹಿಳಾ ಹಾಗೂ ಪುರುಷ ಕೃಷಿ ಕಾರ್ಮಿಕರು ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಇದೆಲ್ಲವೂ ಸುಸೂತ್ರವಾಗಿ ನಡೆಯುತ್ತಿರುವಾಗ, ಬಾವಿಯಲ್ಲಿ ಅವರು ದೊಡ್ಡ ಆಮೆ ನೋಡಿದರು. ಮೊದಲು ಒಬ್ಬರು ಆಮೆಯನ್ನು ತೆಗೆಯಲು ಬಾವಿಗೆ ಇಳಿದಿದ್ದಾರೆ. ಬಾವಿ ಮುಚ್ಚಿದ್ದರಿಂದ ಅಲ್ಲಿ ವಿಷಾನಿಲ ಉತ್ಪತ್ತಿಯಾಗಿದೆ. ಪರಿಣಾಮ ಕೆಳಗಿಳಿದ ವ್ಯಕ್ತಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದ. ಇದನ್ನು ಕಂಡು, ಮೇಲಿದ್ದ ಇಬ್ಬರು ಬಾವಿಗಿಳಿದು ಆತನನ್ನು ರಕ್ಷಿಸಲು ಮುಂದಾದರು. ಆದರೆ, ಕೆಳಗಿಳಿದ ಕೂಡಲೇ ಉಸಿರುಗಟ್ಟಿಸಿದ್ದು, ರಕ್ಷಿಸುವಂತೆ ಕೂಗಾಡಿದ್ದಾರೆ. ಅವರ ಧ್ವನಿ ಕೇಳಿದ ತಕ್ಷಣ ಕೃಷಿ ಕಾರ್ಮಿಕರು ಬಾವಿಯತ್ತ ಓಡಿ ಬಂದರು. ಅವರನ್ನು ರಕ್ಷಿಸಲು ಅವರು ಕಿರುಚಲು ಪ್ರಾರಂಭಿಸಿದರು. ಆದರೆ ಹತ್ತಿರದಲ್ಲಿ ಬೇರೆ ಯಾರೂ ಇಲ್ಲದ ಕಾರಣ ಯಾರೂ ಸಹಾಯಕ್ಕೆ ಬರಲಿಲ್ಲ.

ಮರಣೋತ್ತರ ಪರೀಕ್ಷೆ: ಮಹಿಳೆಯರು ಕೂಡಲೇ ಸೀರೆ ಕಳಚಿ  ಹಗ್ಗದಂತೆ ಮಾಡಿ ಬಾವಿಯೊಳಗೆ ಎಸೆದಿದ್ದಾರೆ. ಸುಧೀರ್ ಮೊರೇಶ್ವರ್ ಹಜಾರೆ ಸೀರೆಯ ಹಿಡಿದುಕೊಂಡು ಮೇಲೆ ಬಂದಿದ್ದಾರೆ. ಆದರೆ, ಉಳಿದ ಇಬ್ಬರು ಕಾರ್ಮಿಕರಾದ ಮಂಗೇಶ್ ಜೈ ಗೋಪಾಲ್ ಗೊಂಧುಲೆ ಮತ್ತು ದಯಾರಾಮ್ ಸೋನಿರಾಮ್ ಭೋಂಡೆ  ಸಾವನ್ನಪ್ಪಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಎರಡೂ ಶವಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.  

ಇದನ್ನೂ ಓದಿ: ಪ್ರತಿಭಟನಾಕಾರರ ಮೇಲೆ ಪೊಲೀಸರ ಗುಂಡಿನ ದಾಳಿ, ಮೂವರು ಸಾವು; ಬಿಹಾರದಲ್ಲಿ ಉದ್ವಿಗ್ನ ಪರಿಸ್ಥಿತಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.