ಮಹಾರಾಷ್ಟ್ರ ಕೊಲ್ಹಾಪುರದಲ್ಲಿ ಭೀಕರ ಪ್ರವಾಹ: ವಾರಣಾ ನದಿ ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ.. - ರಕ್ಷಣಾ ಕಾರ್ಯಾಚರಣೆ
🎬 Watch Now: Feature Video
ಕೊಲ್ಹಾಪುರ (ಮಹಾರಾಷ್ಟ್ರ): ಕೊಲ್ಹಾಪುರ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಇದರಿಂದ ಈ ಭಾಗದ ನದಿಗಳು ಉಕ್ಕಿ ಹರಿಯುತ್ತಿವೆ. ಜಿಲ್ಲೆಯ ವಾರಣಾ ನದಿ ಪಾತ್ರದ ಪನ್ಹಾಳ ತಾಲೂಕಿನ ಕಾಖೆ ಗ್ರಾಮದ ಸಮೀಪದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಈ ವೇಳೆ, ವ್ಯಕ್ತಿಯೊಬ್ಬ ಮರ ಹತ್ತಿ ಕುಳಿತಿದ್ದಾನೆ. ಈ ವ್ಯಕ್ತಿಯು ಸಮೀಪದ ಲದೇವಾಡಿ ಗ್ರಾಮದವನೆಂದು ತಿಳಿದು ಬಂದಿದೆ.
ಲದೇವಾಡಿಯ ಬಜರಂಗ ಖಾಮಕರ್ ರಾತ್ರಿ ಹನ್ನೊಂದು ಗಂಟೆಗೆ ವಾರಣಾ ಪತ್ರದಲ್ಲಿ ಸಿಲುಕಿಕೊಂಡಿದ್ದರು. ಬೆಳಗ್ಗೆ ಜೋರಾಗಿ ಕಿರುಚಲು ಆರಂಭಿಸಿದ ಬಳಿಕ ಸ್ಥಳೀಯರಿಗೆ ಯುವಕರು ಪ್ರವಾಹದಲ್ಲಿ ಸಿಲುಕಿರುವುದು ತಿಳಿದು ಬಂದಿದೆ. ಬಳಿಕ ಒಂಬತ್ತು ಗಂಟೆಗೆ ಪೊಲೀಸರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದರು. ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಪ್ರಸಾದ್ ಸಂಕ್ಪಾಲ್, ಎನ್‌ಡಿಆರ್‌ಎಫ್ ತಂಡ ಹಾಗೂ ಜಿಲ್ಲಾ ವಿಪತ್ತು ನಿರ್ವಹಣಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದರು.
ರಕ್ಷಣಾ ಕಾರ್ಯಾಚರಣೆ ಯಶಸ್ವಿ: ಕಾಖೆ ಗ್ರಾಮದ ಪೊಲೀಸ್ ಠಾಣೆ ನೀಡಿದ ಮಾಹಿತಿ ಮೇರೆಗೆ ಜಿಲ್ಲಾ ವಿಪತ್ತು ನಿರ್ವಹಣಾ ಸಿಬ್ಬಂದಿ ಹಾಗೂ ಎನ್‌ಡಿಆರ್‌ಎಫ್ ಸಿಬ್ಬಂದಿ ತಮ್ಮ ಪರಿಕರಗಳೊಂದಿಗೆ ವಾರಣಾ ನದಿ ಪಾತ್ರಕ್ಕೆ ತಲುಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಸಿ ವ್ಯಕ್ತಿಯ ಪ್ರಾಣ ಉಳಿಸಿದ್ದಾರೆ. ಆದರೆ, ಮರಕ್ಕೆ ಸಿಲುಕಿದ್ದ ವ್ಯಕ್ತಿಯನ್ನು ನೋಡಲು ಜನಸಾಗರವೇ ನೆರೆದಿತ್ತು. ನದಿಯ ಪ್ರವಾಹ ನೋಡಲು ಬಂದಿದ್ದ ವೇಳೆ ಕಾಲು ಜಾರಿ ನದಿಗೆ ಬಿದ್ದಿದ್ದೇನೆ ಎಂದು ಬಜರಂಗ ಖಾಮ್ಕರ್ ಹೇಳಿದ್ದಾರೆ.
ಇದನ್ನೂ ಓದಿ: ದೇವಸ್ಥಾನ, ಮನೆಗಳಿಗೆ ನುಗ್ಗಿದ ಕಾಡಾನೆ.. ಅಪಾರ ಹಾನಿ, ಆತಂಕದಲ್ಲಿ ಜನರು... ವಿಡಿಯೋ ವೈರಲ್