ಮಹಿಳೆಯರ ನೂಕುನುಗ್ಗಲಿಗೆ ಬೇಸತ್ತು ಚಾಲಕನ ಬಾಗಿಲ ಮೂಲಕವೇ ಬಸ್ ಸೇರಿದ ಪುರುಷರು: ವಿಡಿಯೋ - ಬಸ್ ಬಾಗಿಲಲ್ಲಿ ಮಹಿಳೆಯರ ನೂಕು ನುಗ್ಗಲು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/25-06-2023/640-480-18840803-thumbnail-16x9-new.jpg)
ಹಾವೇರಿ: ಶಕ್ತಿ ಯೋಜನೆ ಜಾರಿಯಾದಾಗಿನಿಂದ ರಾಜ್ಯದಲ್ಲಿ ಮಹಿಳೆಯರ ಬಸ್ ಸಂಚಾರ ಹೆಚ್ಚಳವಾಗಿದೆ. ಅಲ್ಲಲ್ಲಿ ಸಮಸ್ಯೆಗಳೂ ಉಂಟಾಗುತ್ತಿವೆ. ಹಾವೇರಿ ನಿಲ್ದಾಣದಲ್ಲಿ ಡ್ರೈವರ್ ಸೀಟ್ನ ಡೋರ್ನ ಮೂಲಕವೇ ಪುರುಷರು ಬಸ್ ಏರಿದ ಘಟನೆ ನಡೆಯಿತು. ಬಸ್ ಸಂಖ್ಯೆ ಕಡಿಮೆ ಇರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡಿದ್ದಾರೆ. ಅದರಲ್ಲೂ ಪುರುಷ ಪ್ರಯಾಣಿಕರು ಬಸ್ನಲ್ಲಿ ಆಸನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಹುಬ್ಬಳ್ಳಿಗೆ ಹೋಗುವ ಬಸ್ ಬಾಗಿಲಲ್ಲಿ ಹೆಚ್ಚು ಮಹಿಳೆಯರು ನಿಂತಿದ್ದರು. ಇದರಿಂದ ಪುರುಷರು ಡ್ರೈವರ್ ಸೀಟ್ನಿಂದಲೇ ಬಸ್ ಹತ್ತಿದರು.
ಇದನ್ನೂ ಓದಿ: Shakti Scheme: ಮೊದಲ ವಾರ 3 ಕೋಟಿಗೂ ಹೆಚ್ಚು ಮಹಿಳೆಯರಿಂದ ಉಚಿತ ಪ್ರಯಾಣ: ಟಿಕೆಟ್ ಮೌಲ್ಯವೆಷ್ಟು ಗೊತ್ತಾ?
ರಾಜ್ಯ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ. ಉಚಿತ ಪ್ರಯಾಣಗ ಕಾರಣಕ್ಕೆ ಮಹಿಳೆಯರು ಉತ್ಸಾಹದಿಂದ ಬಸ್ ಏರುತ್ತಿದ್ದಾರೆ. ಪುರುಷರು ಕುಳಿತು ಪ್ರಯಾಣಿಸಲು ಹರಸಾಹಸ ನಡೆಸುತ್ತಿದ್ದಾರೆ. ಕೆಲವೆಡೆ ಸಾರಿಗೆ ಸಿಬ್ಬಂದಿಗೂ ಸಂಕಷ್ಟ ತಂದೊಡ್ಡಿದೆ. ಎಲ್ಲ ಬಸ್ಗಳು ರಶ್..ರಶ್.. ಎಂಬ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ: ಮಹಿಳಾ ಮಣಿಗಳಿಂದ ತುಂಬಿ ತುಳುಕುತ್ತಿದ್ದ ಬಸ್.. ವಾಹನ ಏರಲು ನಿರಾಕರಿಸಿ ಕಣ್ನೀರಿಟ್ಟ ಬಾಲಕ: ವಿಡಿಯೋ