ಚಿಕ್ಕಬಳ್ಳಾಪುರದಲ್ಲಿ ಅಮಿತ್ ಶಾ ಸ್ವಾಗತಕ್ಕೆ ಸಾವಿರ ಕೆ.ಜಿ ತೂಕದ ಬೃಹತ್ ಸೇಬಿನ ಹಾರ: ವಿಡಿಯೋ - ವಿಧಾನ ಸಭೆ ಚುನಾವಣೆ 2023
🎬 Watch Now: Feature Video
ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನದ ದಿನ ಸಮೀಪಿಸುತ್ತಿದೆ. ವಿವಿಧ ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರು, ಸಿನಿಮಾ ರಂಗದ ಖ್ಯಾತ ನಟ, ನಟಿಯರು ಸೇರಿಕೊಂಡು ಅಭ್ಯರ್ಥಿಗಳ ಪರ ಬಿರುಸಿನ ಮತ ಪ್ರಚಾರ ನಡೆಸುತ್ತಿದ್ದಾರೆ. ಇಂದು ಚಿಕ್ಕಬಳ್ಳಾಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ನಡೆಸಲಿದ್ದಾರೆ.
ನಗರಕ್ಕೆ ಮಧ್ಯಾಹ್ನ 3 ಗಂಟೆಗೆ ಆಗಮಿಸುತ್ತಿರುವ ಅಮಿತ್ ಶಾ, ಕ್ಷೇತ್ರದ ಅಭ್ಯರ್ಥಿ ಸಚಿವ ಡಾ.ಕೆ.ಸುಧಾಕರ್ ಪರ ಮತಬೇಟೆ ನಡೆಸಲಿದ್ದಾರೆ. ನಗರದ ಒಕ್ಕಲಿಗರ ಭವನದಿಂದ ಮರಳು ಸಿದ್ದೇಶ್ವರ ದೇವಸ್ಥಾನವರಿಗೂ ರೋಡ್ ಶೋ ನಡೆಯಲಿದೆ. ಅಮಿತ್ ಶಾ ಸ್ವಾಗತಕ್ಕೆ ಸಚಿವ ಸುಧಾಕರ್ ಅಭಿಮಾನಿಗಳು 1 ಸಾವಿರ ಕೆ.ಜಿ ತೂಕದ ಬೃಹತ್ ಸೇಬು ಹಣ್ಣಿನ ಹಾರ ಸಿದ್ದಪಡಿಸುತ್ತಿದ್ದಾರೆ. 12 ಮಂದಿ ಕೆಲಸಗಾರರು ಸತತ ಮೂರು ದಿನಗಳಿಂದ ಸಿದ್ದಪಡಿಸುತ್ತಿರುವ ಸೇಬಿನ ಹಾರಕ್ಕೆ ಬೆಂಗಳೂರಿನಿಂದ ಸಾವಿರಾರು ಕಾಶ್ಮೀರಿ ಆ್ಯಪಲ್‌ಗಳನ್ನು ತರಲಾಗಿದೆ. ಈ ಹಾರಕ್ಕೆ 2 ಲಕ್ಷ ರೂಪಾಯಿ ವೆಚ್ಚವಾಗುತ್ತಿದೆ ಎಂದು ತಿಳಿದು ಬಂದಿದೆ. ನಗರದ ಅಸ್ಲಂ ಪಾಶ ನೇತೃತ್ವದಲ್ಲಿ ಹಾರ ರೆಡಿಯಾಗುತ್ತಿದೆ.
ಇದನ್ನೂ ಓದಿ: ಬೆಳಗಾವಿಯಲ್ಲಿ ಅಮಿತ್ ಶಾ ರೋಡ್ ಶೋ: ವಿಡಿಯೋ