ಮಣಿಪುರ ಹಿಂಸಾಚಾರದ ಬಗ್ಗೆ ಪ್ರಧಾನಿ ಏಕೆ ಮೌನವಾಗಿದ್ದಾರೆ?: ಬಿಹಾರದ ಡಿಸಿಎಂ ತೇಜಸ್ವಿ ಯಾದವ್ ಪ್ರಶ್ನೆ
🎬 Watch Now: Feature Video
ಪಾಟ್ನಾ(ಬಿಹಾರ) : ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕೇಂದ್ರದ ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ದೇಶದ ಪ್ರಧಾನಿ ಯಾರು? ಎಂದು ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಮಣಿಪುರಕ್ಕೆ ಹೋಗಬಹುದಾದರೆ ಪ್ರಧಾನಿ ನರೇಂದ್ರ ಮೋದಿ ಅಲ್ಲಿಗೆ ಏಕೆ ಹೋಗಬಾರದು? ಮಣಿಪುರದಲ್ಲಿ ನಡೆದ ಘಟನೆಯನ್ನು ಇಡೀ ದೇಶವೇ ನೋಡಿದೆ ಎಂದಿದ್ದಾರೆ.
ಮಣಿಪುರ ಘಟನೆ ಬಗ್ಗೆ ಕೋಪಗೊಂಡ ತೇಜಸ್ವಿ: ಮಣಿಪುರದಲ್ಲಿ ಬಿಜೆಪಿಯ ಬದಲು ಬೇರೆಯವರ ಸರ್ಕಾರ ಅಂದರೆ ವಿರೋಧ ಪಕ್ಷದ ಸರ್ಕಾರ ಇದ್ದಿದ್ದರೆ ತನಿಖೆಗೆ ಏಜೆನ್ಸಿಗಳ ಸಾಲು ಇರುತ್ತಿತ್ತು. ಈ ವಿಚಾರದಲ್ಲಿ ಪ್ರಧಾನಿ ಏಕೆ ಮೌನವಾಗಿದ್ದಾರೆ? ಎಂದು ತೇಜಸ್ವಿ ಪ್ರಶ್ನಿಸಿದ್ದಾರೆ. ಅಧಿಕಾರದಲ್ಲಿರುವವರೂ ಹೋಗುವುದು ಖಚಿತ. ಯಾರೂ ಹೆಮ್ಮೆ ಪಡಬಾರದು ಎಂದು ತೇಜಸ್ವಿ ಹೇಳಿದರು.
ಮಣಿಪುರದಿಂದ ಮುಜುಗರದ ವಿಡಿಯೋ ಬಂದಿದೆ. ಅಲ್ಲಿನ ಸಿಎಂ ಏನು ಹೇಳಿಕೆ ನೀಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ರಾಹುಲ್ ಗಾಂಧಿ ಹೋಗುತ್ತಿದ್ದಾರೆ, ಹಾಗಾದರೆ ಪ್ರಧಾನಿ ಏಕೆ ಹೋಗಬಾರದು? ಬೆಂಗಳೂರಿನಲ್ಲೂ ಈ ವಿಷಯವನ್ನು ಪ್ರಸ್ತಾಪಿಸಿದ್ದೇವೆ. ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯದಲ್ಲಿ ಇಂತಹ ಘಟನೆ ನಡೆದಿದ್ದರೆ, ಯಾವ ಸಂಸ್ಥೆಗಳು ಪ್ರವೇಶಿಸುತ್ತಿದ್ದವೋ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಮಹಿಳೆಯರಿಬ್ಬರ ಬೆತ್ತಲೆಗೊಳಿಸಿ ಮೆರವಣಿಗೆ, ತೀವ್ರ ಆಕ್ರೋಶ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ