ಮಂಗಳೂರು ದಸರಾ: ಶ್ರೀಕ್ಷೇತ್ರ‌ ಕುದ್ರೋಳಿಯಲ್ಲಿ ನವದುರ್ಗೆಯರ ಪ್ರತಿಷ್ಠಾಪನೆ- ವಿಡಿಯೋ

🎬 Watch Now: Feature Video

thumbnail

ಮಂಗಳೂರು : ದಸರಾ ಹಿನ್ನೆಲೆಯಲ್ಲಿ ಭಾನುವಾರ ನಗರದ ಶ್ರೀ ಕ್ಷೇತ್ರ‌ ಕುದ್ರೋಳಿಯ ಕೊರಗಪ್ಪ ಸಭಾಂಗಣದಲ್ಲಿ ಶ್ರೀ ಶಾರದಾ ಮಾತೆ, ಶ್ರೀ ಮಹಾಗಣಪತಿ ಹಾಗೂ ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಿತು. ಕುದ್ರೋಳಿಯ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅವರ ಉಪಸ್ಥಿತಿಯಲ್ಲಿ ಪ್ರತಿಷ್ಠಾಪನೆ ಕಾರ್ಯ ನಡೆಯಿತು. 

ಕರ್ಣಾಟಕ ಬ್ಯಾಂಕ್ ಸಿಇಒ ಪ್ರದೀಪ್ ಕುಮಾರ್ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು. ಈ ಬಾರಿಯ ದಸರಾ ದರ್ಬಾರ್ ಮಂಟಪ ಕುತೂಹಲ ಕೆರಳಿಸುವಂತಿದೆ. ಶಿಲಾಬಾಲಿಕೆಯರು, ವಿವಿಧ ದೇವರುಗಳ ಕಲಾಕೃತಿಗಳು ಮಂಟಪದ ಕಂಬಕಂಬಗಳಲ್ಲಿ ರಾರಾಜಿಸುತ್ತಿವೆ. ಸಾಮಾನ್ಯವಾಗಿ ನವದುರ್ಗೆಯರನ್ನು ಮಂಟಪದೊಳಗಡೆ ಪ್ರತಿಷ್ಠಾಪಿಸಲಾಗುತ್ತಿತ್ತು. ಆದರೆ ಈ ಬಾರಿ ಪ್ರತ್ಯೇಕ ಗುಡಿಗಳನ್ನು ನಿರ್ಮಿಸಿ ಅದರೊಳಗಡೆ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗಿದೆ. 

ಮಂಟಪದ ಮೇಲ್ಗಡೆ ಸ್ವಯಂಚಾಲಿತವಾಗಿ ತಿರುಗುವ ಮೇಲ್ಛಾವಣಿಯನ್ನು ಅತ್ಯಾಕರ್ಷಕವಾಗಿ ರಚಿಸಲಾಗಿದೆ. ದರ್ಬಾರ್ ಮಂಟಪ ಒಳಹೋಗುತ್ತಿದ್ದಂತೆ ಎಡ ಬಲ ಬದಿಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹಾಗೂ ಶ್ರೀ ಗೋಕರ್ಣನಾಥ ದೇವರ ಬೃಹತ್ ಭಾವಚಿತ್ರಗಳನ್ನು ಅಳವಡಿಸಲಾಗಿದೆ. ಮುಲ್ಕಿಯ ಚಂದ್ರಶೇಖರ ಸುವರ್ಣ ಅವರ ಸುವರ್ಣ ಆರ್ಟ್ಸ್ ತಂಡ ದಸರಾ ಮಂಟಪ ನಿರ್ಮಿಸಿದೆ.

ಇದನ್ನೂ ಓದಿ: ಕುಟುಂಬ ಸಮೇತರಾಗಿ ಹುಚ್ಚರಾಯ ಸ್ವಾಮಿಯ ದರ್ಶನ ಪಡೆದ ಯಡಿಯೂರಪ್ಪ- ವಿಡಿಯೋ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.