ಮಂಗಳೂರಿನಲ್ಲಿ ಮತ ಚಲಾಯಿಸಿ ಸಂಭ್ರಮಿಸಿದ ಮಂಗಳಮುಖಿಯರು - 2023 Karnataka Legislative Assembly election
🎬 Watch Now: Feature Video
ಮಂಗಳೂರು: ನಗರದಲ್ಲಿ ಮಂಗಳಮುಖಿಯರು ಮತದಾನ ಮಾಡುವ ಮೂಲಕ ನಾಗರಿಕ ಹಕ್ಕು ಚಲಾಯಿಸಿ ಸಂಭ್ರಮಿಸಿದರು. ನಗರದ ಮಿಲಾಗ್ರಿಸ್ ಶಾಲೆಯಲ್ಲಿ ಮತದಾನ ಮಾಡಿದ ಮಂಗಳಮುಖಿಯರು ಹಕ್ಕು ಚಲಾವಣೆ ಮಾಡಲು ಅವಕಾಶ ದೊರಕಿದ್ದಕ್ಕಾಗಿ ಸಂತಸಗೊಂಡಿದ್ದಾರೆ. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 46 ಮಂದಿ ಮಂಗಳಮುಖಿ ಮತದಾರರಿದ್ದಾರೆ. ದ.ಕ.ಜಿಲ್ಲೆಯಲ್ಲಿ ಒಟ್ಟು 75 ಮಂದಿ ಮತದಾರರಿದ್ದಾರೆ.
ಮತ ಚಲಾಯಿಸಿ ಸಂಭ್ರಮಿಸಿ ಮಾತನಾಡಿದ ಮಂಗಳಮುಖಿ ಸಂಜನಾ, ಎರಡನೇ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾಯಿಸುತ್ತಿದ್ದೇನೆ. ಮತದಾನ ಮಾಡಲು ನಮ್ಮನ್ನು ಪರಿಗಣಿಸಿರುವುದು ಅತೀವ ಸಂತಸ ತಂದಿದೆ. ವೋಟ್ ಅಂದರೆ ನಮಗೆ ಗೊತ್ತಿರಲಿಲ್ಲ. ಜನರೆಲ್ಲ ಮತದಾನ ಮಾಡುವಾಗ ನಾವು ಯಾವಾಗ ವೋಟ್ ಹಾಕುವುದು ಎಂದು ಯೋಚಿಸುತ್ತಿದ್ದೆವು.
ಆದರೆ, ಈಗ ಮತದಾನ ಮಾಡಲು ನಮಗೂ ಅವಕಾಶ ದೊರಕಿರುವುದು ಸಂತಸ ತಂದಿದೆ. ಎಲ್ಲರೂ ಹೇಳುತ್ತಿದ್ದರು ನಾವು ಬದಲಾಗಬೇಕು ಎಂದು. ಆದರೆ ಜನರು ಬದಲಾದರೆ ತಾನೆ ನಾವು ಬದಲಾಗುವುದು. ಈಗ ಆ ಅವಕಾಶ ನಮಗೆ ಸಿಕ್ಕಿದೆ. ಸಮಾಜ ನಮ್ಮನ್ನು ಒಳ್ಳೆಯ ರೀತೀಯಲ್ಲಿ ನೋಡುತ್ತಿದೆ ಈ ಅವಕಾಶವನ್ನು ಬಳಸಿಕೊಂಡು ಮತದಾನ ಮಾಡಿ. ಮತದಾನ ನಮ್ಮ ಹಕ್ಕು ಎಲ್ಲರೂ ಮತ ಚಲಾಯಿಸಿ ಎಂದರು.
ಇದನ್ನೂ ಓದಿ: Live Updates: ರಾಜ್ಯದಲ್ಲಿ ಸರಾಗವಾಗಿ ಸಾಗುತ್ತಿರುವ ವೋಟಿಂಗ್ ಪ್ರಕ್ರಿಯೆ - ಈವರೆಗೆ 20.99% ಮತದಾನ