ಕರ್ಕಶ ಶಬ್ಧ ಮಾಡುವ ಸೈಲೆನ್ಸರ್‌ಗಳ ಮೇಲೆ ಬುಲ್ಡೋಜರ್ ಹರಿಸಿದ ಮಂಡ್ಯ ಪೊಲೀಸರು - ಸೈಲೆನ್ಸರ್
🎬 Watch Now: Feature Video
Published : Jan 1, 2024, 12:23 PM IST
ಮಂಡ್ಯ: ನಗರದಲ್ಲಿ ಬೈಕ್‌ಗಳ ಮೂಲಕ ಕರ್ಕಶ ಶಬ್ಧ ಮಾಡುತ್ತಿದ್ದ ಸವಾರರಿಗೆ ಜಿಲ್ಲೆಯ ಪೊಲೀಸರು ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಆಲ್ಟ್ರೇಷನ್ ಮಾಡಿ ಬೈಕ್‌ಗಳಿಗೆ ಅಳವಡಿಸಲಾಗಿದ್ದ ಸೈಲೆನ್ಸರ್‌ಗಳನ್ನು ವಶಪಡಿಸಿಕೊಂಡು ಬುಲ್ಡೋಜರ್ ಹರಿಸುವ ಮೂಲಕ ಸಂಚಾರಿ ಪೊಲೀಸರು ನಾಶಪಡಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, "ಸೈಲೆನ್ಸರ್‌ಗಳನ್ನು ಮಾಡಿಫೈ ಮಾಡಿ ಅದನ್ನು ಬೈಕ್ಗೆ ಅಳವಡಿಸಿಕೊಂಡು ಯುವಕರು ಓಡಿಸುತ್ತಿದ್ದರು. ಇಂತಹ ಬೈಕ್‌ಗಳ ಸೈಲೆನ್ಸರ್‌ಗಳನ್ನು ವಶಕ್ಕೆ ಪಡೆದು ಮಂಡ್ಯ ಸಂಚಾರಿ ಠಾಣೆಯ ಮುಂದೆ ನಾಶ ಪಡಿಸಲಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ದೊಡ್ಡಬಳ್ಳಾಪುರದಲ್ಲಿ ಹೆಚ್ಚಾಗುತ್ತಿದೆ ಬೈಕ್ ವ್ಹೀಲಿಂಗ್ ಕ್ರೇಜ್ : ಬೇಕಿದೆ ಕಡಿವಾಣ
2023ನೇ ಸಾಲಿನಲ್ಲಿ 489 ಅಪಘಾತಗಳು ಸಂಭವಿಸಿದ್ದು, 20 ರಿಂದ 30ನೇ ವಯಸ್ಸಿನ ಯುವಕರೇ ಹೆಚ್ಚಾಗಿ ಅಪಘಾತ ಮಾಡಿಕೊಂಡಿದ್ದಾರೆ. ಹಾಗಾಗಿ, ಎಲ್ಲರೂ ಸಂಚಾರಿ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಇದರಿಂದ ಅಪಘಾತದ ಸಂಖ್ಯೆ ಕಡಿಮೆ ಮಾಡಬಹುದು. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ: ಹ್ಯಾಂಡಲ್ ಇಲ್ಲದ ಬೈಕ್ನಲ್ಲಿ ಕಲಬುರಗಿಯಿಂದ ಬೆಂಗಳೂರಿಗೆ ಹೊರಟ ಕನ್ನಡಾಭಿಮಾನಿ