ಮಾಜಿ ಸಚಿವ ಎಂ ಬಿ ಪಾಟೀಲ್ ಪರ ಪ್ರಚಾರಕ್ಕೆ ಪುತ್ರನ ಸಿದ್ಧತೆ: ಎಲ್ಇಡಿ ಪರದೆಯಲ್ಲಿ ವಿಡಿಯೋ ಡಾಕ್ಯುಮೆಂಟರಿ ಪ್ರದರ್ಶನ - ವಿಡಿಯೋ ಡಾಕ್ಯುಮೆಂಟರಿ ಪ್ರದರ್ಶನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-17699587-thumbnail-4x3-don.jpg)
ವಿಜಯಪುರ: ಚುನಾವಣೆಗೆ ದಿನಗಳು ಸನಿಹವಾಗುತ್ತಿದ್ದಂತೆ ಪ್ರಚಾರ ಜೋರಾಗಿಯೇ ನಡೆಯುತ್ತದೆ. ಪಕ್ಷಗಳು ರಾಜ್ಯಾದ್ಯಂತ ಪ್ರವಾಸ ಮಾಡಿ ಜನರ ಗಮನ ಸೆಳೆಯಲು ಅಲ್ಲಲ್ಲಿ ಸಮಾವೇಶ, ಸಭೆಗಳನ್ನು ಮಾಡುತ್ತಿದೆ. ಇತ್ತ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಎಂ ಬಿ ಪಾಟೀಲ್ ಅವರು ತಮ್ಮ ಕ್ಷೇತ್ರದಲ್ಲಿ ಈಗಿನಿಂದಲೇ ಪ್ರಚಾರ ಆರಂಭಿಸಿದ್ದಾರೆ. ಬಬಲೇಶ್ವರ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದ ಜತೆ ಐದು ವರ್ಷ ಅವರು ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಎರಡು ಹಂತದಲ್ಲಿ ಪ್ರಚಾರ ಮಾಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಅವರ ಹಿರಿಯ ಪುತ್ರ ಬಸನಗೌಡ ಎಂ ಪಾಟೀಲ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಎರಡು ಹಂತದಲ್ಲಿ ಪ್ರಚಾರ: ಒಂದು ಹಂತದಲ್ಲಿ ತಮ್ಮ ತಂದೆ ಗೃಹ ಹಾಗೂ ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ಮಾಡಿದ ಅಭಿವೃದ್ಧಿ ಕಾರ್ಯಗಳ ಸಂಗ್ರಹಿಸಿ ವಿಶಿಷ್ಟ ರೀತಿ ವಿಡಿಯೋ ಡಾಕ್ಯುಮೆಂಟರಿ ಮಾಡಲಾಗಿದೆ. ಬಸ್ ಮೂಲಕ ಬಬಲೇಶ್ವರ ಕ್ಷೇತ್ರ ಹಾಗೂ ಜಿಲ್ಲೆಯ ವಿವಿಧ ಭಾಗದಲ್ಲಿ ಪ್ರಚಾರ ಮಾಡಲಾಗುವುದು ಎಂದು ಬಸನಗೌಡ ಎಂ ಪಾಟೀಲ್ ಹೇಳಿದರು.
ಎರಡನೇ ಹಂತದಲ್ಲಿ ತಂದೆಯವರು ಮಾಡಿದ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾನು ಎಂ.ಬಿ. ಪಾಟೀಲ್ ಎನ್ನುವ ಪೋಸ್ಟರ್ಗಳನ್ನು ಮತದಾರರಿಗೆ ನೀಡಿ ತಮ್ಮ ತಮ್ಮ ಮನೆ ಬಳಿ ಅಂಟಿಸುವ ಕೆಲಸ ಮಾಡಲಾಗುವುದು. ನಂತರ ಚುನಾವಣೆ ಹತ್ತಿರ ಬರುತ್ತಿದ್ದಂತೆ ಮತ್ತೊಮ್ಮ ಪ್ರಚಾರ ಮಾಡುವುದಾಗಿ ಹೇಳಿದರು.
ಬಸನಗೌಡ ಎಂ ಪಾಟೀಲ್ ರಾಜಕೀಯ ಪ್ರವೇಶಿಸುತ್ತಾರಾ?: ಎಂ ಬಿ ಪಾಟೀಲ್ ಪುತ್ರ ಬಸನಗೌಡ ಪಾಟೀಲ್ ಈ ಹಿಂದೆ ಎಂಎಲ್ ಸಿ ಚುನಾವಣೆಗೆ ಸ್ಪರ್ಧಿಸಲು ಅರ್ಜಿ ಸಲ್ಲಿಸಿದ್ದರು. ಆದರೆ ವಯೋಮಿತಿ ಕಡಿಮೆ ಇರುವ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ತಂದೆಯ ಪ್ರಚಾರಕ್ಕೆ ಮುಂದಾದ ಬಸನಗೌಡ ಎಂ ಪಾಟೀಲ್ ಅವರನ್ನು ಇದು ನಿಮ್ಮ ರಾಜಕೀಯ ಪ್ರವೇಶವೇ ಎಂದು ಪ್ರಶ್ನಿಸಿದ್ದಕ್ಕೆ,"ತಾನು ಕೇವಲ ತಂದೆಯ ಚುನಾವಣೆಗೆ ಕೈ ಜೋಡಿಸುತ್ತಿದ್ದು, ಸದ್ಯ ರಾಜಕೀಯಕ್ಕೆ ಬರುವ ಯೋಚನೆ ಇಲ್ಲ ಎಂದರು.
ಇದನ್ನೂ ಓದಿ: ಹೆಚ್ಡಿಕೆ ನಾವೆಲ್ಲಿ ಊಟ ಮಾಡ್ತೀವಿ ಅಂತ ಗೂಢಚಾರಿಕೆ ಶುರು ಮಾಡಿದ್ರಾ? ಸಚಿವ ಅಶ್ವತ್ಥನಾರಾಯಣ ಪ್ರಶ್ನೆ