Mountain collapse: ಗುಡ್ಡ ಕುಸಿತದಿಂದ ಬದರಿನಾಥ ಹೆದ್ದಾರಿ ಬಂದ್, ಮಾರ್ಗಮಧ್ಯೆ ಸಿಲುಕಿದ ಚಾರ್ಧಾಮ್ ಯಾತ್ರಿಕರು: ವಿಡಿಯೋ
🎬 Watch Now: Feature Video
ಚಮೋಲಿ(ಉತ್ತರಾಖಂಡ): ಉತ್ತರಾಖಂಡದಲ್ಲಿ ಭಾರೀ ವರ್ಷಧಾರೆಯಾಗುತ್ತಿದ್ದು, ಭೂಕುಸಿತ ಉಂಟಾಗುತ್ತಿದೆ. ಬುಧವಾರ ಬದರಿನಾಥ ಹೆದ್ದಾರಿಯಲ್ಲಿ ಗುಡ್ಡ ಕುಸಿದು ಬಿದ್ದಿದ್ದು, ಈ ಭಯಾನಕ ವಿಡಿಯೋ ಪ್ರಯಾಣಿಕರ ಮೊಬೈಲ್ನಲ್ಲಿ ಸೆರೆಯಾಗಿದೆ. ಚಮೋಲಿ ಜಿಲ್ಲೆಯ ಚಿಂಕಾ ಎಂಬಲ್ಲಿ ಈ ಘಟನೆ ನಡೆದಿದೆ. ಗುಡ್ಡ ಕುಸಿತ ಉಂಟಾಗಿದ್ದರಿಂದ ಬದರಿನಾಥ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ. ಅವಶೇಷಗಳು ಅಲಕನಂದಾ ನದಿಯಲ್ಲಿ ತೇಲಿಕೊಂಡು ಹೋಗಿವೆ. ಹೆದ್ದಾರಿ ಮೂಲಕ ಹೊರಡಬೇಕಿದ್ದ ಚಾರ್ಧಾಮ್ ಯಾತ್ರಿಕರು ಮಾರ್ಗಮಧ್ಯೆ ಸಿಲುಕಿಕೊಂಡಿದ್ದಾರೆ.
ಇದನ್ನೂ ಓದಿ: Viral Fever: ಹೆಚ್ಚುತ್ತಿರುವ ಡೆಂಘೀ.. ಇವತ್ತೇ ಒಂದು ಸಾವು, ಇದುವೆರೆಗೆ ಸಾವನ್ನಪ್ಪಿದವರ ಸಂಖ್ಯೆ 39ಕ್ಕೆ ಏರಿಕೆ!
ರಸ್ತೆ ತೆರವಿಗೆ ಜಿಲ್ಲಾಡಳಿಯ ಕ್ರಮ ಕೈಗೊಳ್ಳುತ್ತಿದ್ದು ಸದ್ಯಕ್ಕೆ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ. ಈ ದಿನಮಾನಗಳಲ್ಲಿ ರಾಜ್ಯದಲ್ಲಿ ಮಳೆಯಾಗುವುದು ವಾಡಿಕೆ. ಪ್ರತಿ ವರ್ಷವೂ ಈ ಅವಧಿಯಲ್ಲಿ ಭೂಕುಸಿತ ಸಂಭವಿಸುತ್ತಲೇ ಇರುತ್ತದೆ. ಇದರಿಂದಾಗಿ ಜಿಲ್ಲೆಯ ಹಲವು ರಸ್ತೆಗಳು ಬಂದ್ ಆಗುತ್ತವೆ. ಗೋಪೇಶ್ವರದ ನಾಯಿಗ್ವಾಡ್‌ನಲ್ಲಿಯೂ ಗುರುವಾರ ಬೆಳಗ್ಗೆ ಭೂಕುಸಿತ ಸಂಭವಿಸಿದೆ. ಅಲ್ಲಿಯೂ ರಸ್ತೆ ಬಂದ್ ಆಗಿದೆ.
ಇದನ್ನೂ ಓದಿ: ಬಾಲಕನನ್ನು ಗುಂಡಿಕ್ಕಿ ಕೊಂದ ಪೊಲೀಸರು.. ಭುಗಿಲೆದ್ದ ಆಕ್ರೋಶ, ನೂರಾರು ಕಾರುಗಳಿಗೆ ಬೆಂಕಿ, ಪಟಾಕಿಯಿಂದ ದಾಳಿ