ಆನೇಕಲ್: ರಸ್ತೆಯಲ್ಲಿ ಕಾರು ಚಾಲಕನಿಗೆ ಚಿರತೆ ಪ್ರತ್ಯಕ್ಷ - ಚಿರತೆ ಫೋಟೋ ವೈರಲ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/30-12-2023/640-480-20389331-thumbnail-16x9-lek.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Dec 30, 2023, 12:54 PM IST
ಆನೇಕಲ್ : ಆನೇಕಲ್ ತಾಲೂಕಿನ ಹುಸ್ಕೂರು ಮದ್ದೂರಮ್ಮ ದೇವಾಲಯದ ಹಿಂಬದಿ ರಸ್ತೆಯಲ್ಲಿ ಇಂದು ನಸುಕಿನ ಜಾವ ತೆರಳುತ್ತಿದ್ದ ಕಾರು ಚಾಲಕನಿಗೆ ಚಿರತೆ ಕಾಣಿಸಿದೆ. ಕೂಡಲೇ ಚಾಲಕ ಮೊಬೈಲ್ನಲ್ಲಿ ಚಿರತೆ ಫೋಟೋ ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಫುಲ್ ವೈರಲ್ ಆಗಿದೆ.
ಸಾಮಾಜಿಕ ಜಾಲತಾಣದಲ್ಲಿ ಚಿರತೆ ಫೋಟೋ ವೈರಲ್ ಆಗುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೋನ್ ಇಟ್ಟಿದ್ದಾರೆ. ಕಳೆದ ವಾರವಷ್ಟೇ ಚಿರತೆಯೊಂದು ಕೋಳಿಯನ್ನು ಬೇಟೆಯಾಡಿ ತಿಂದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಕಳೆದ ವಾರ ಗಟ್ಟಹಳ್ಳಿ, ಹುಸ್ಕೂರು, ಕನ್ನಲ್ಲಿ ಭಾಗದಲ್ಲಿ ರಾತ್ರಿ ವೇಳೆ ಚಿರತೆ ಕಾಣಿಸಿಕೊಂಡಿತ್ತು. ಈಗ ಪ್ರತ್ಯಕ್ಷವಾಗಿರುವುದು ಅದೇ ಚಿರತೆ ಎಂದು ಅಂದಾಜಿಸಲಾಗಿದೆ. ಚಿರತೆ ಕಂಡು ಬಂದ ಪ್ರದೇಶದಲ್ಲಿ 400 ಎಕರೆ ಸಿಲ್ಕ್ ಫಾರ್ಮ್ ಇದ್ದು, ಚಿರತೆಯ ಚಲನವಲನ ಕಂಡು ಹಿಡಿಯಲು ಅನುಕೂಲವಾಗಲಿದೆ. ಹಾಗೆಯೇ, ಮತ್ತೊಂದು ಬೋನ್ ಇಡಲು ಅರಣ್ಯಾಧಿಕಾರಿಗಳು ಸಜ್ಜಾಗಿದ್ದಾರೆ.
ಇದನ್ನೂ ಓದಿ : ನೆಲಮಂಗಲ : ಹೊಂಚು ಹಾಕಿ ಕಾಯ್ದಿದ್ದು ನಾಯಿ ಮರಿ ಹೊತ್ತೊಯ್ದ ಚಿರತೆ!