ದಿಢೀರ್‌ ಬಾಯ್ತೆರೆದ ದೆಹಲಿಯ ರಸ್ತೆ! ಅವ್ಯವಸ್ಥೆಗೆ ಸಾರ್ವಜನಿಕರ ಆಕ್ರೋಶ- ವಿಡಿಯೋ - ETV Bharath Kannada news

🎬 Watch Now: Feature Video

thumbnail

By

Published : Jul 5, 2023, 1:44 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಬೆಳಗ್ಗೆ ರಸ್ತೆ ಮಧ್ಯೆ ಏಕಾಏಕಿ ಬೃಹತ್​ ಹೊಂಡ ನಿರ್ಮಾಣವಾಯಿತು. ಜನಕ್‌ಪುರಿ ಪ್ರದೇಶದ ರಸ್ತೆಯಲ್ಲಿ ಘಟನೆ ಸಂಭವಿಸಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ವರದಿಯಾಗಿದೆ. ನಗರದ ರಸ್ತೆಗಳಲ್ಲಿ ಈ ರೀತಿ ದಿಢೀರ್ ಗುಂಡಿ ಬೀಳಲು ಕಾರಣವೇನು ಎಂದು ತಿಳಿದುಬಂದಿಲ್ಲ. ಬಾಯ್ತೆರೆದ ರಸ್ತೆ ಮಧ್ಯೆ ಒಳಚಂರಂಡಿಯೂ ಇಲ್ಲ. ಹೀಗಿದ್ದೂ ಹೊಂಡ ಕಾಣಿಸಿಕೊಳ್ಳಲು ಕಾರಣ ಏನು ಎಂಬುದೇ ಪ್ರಶ್ನೆ. ಒಮ್ಮೆಗೆ ಮಣ್ಣು ಸಡಿಲಗೊಂಡು ಕುಸಿದಂತೆ ಕಂಡುಬರುತ್ತಿದೆ. ಪೊಲೀಸರು ಸುತ್ತಲೂ ಬ್ಯಾರಿಕೇಡ್​ಗಳಿಂದ ಜನಸಂಚಾರ ನಿರ್ಬಂಧಿಸಿದ್ದಾರೆ.   

ರಾಷ್ಟ್ರ ರಾಜಧಾನಿಯಲ್ಲಿ ಕಳೆದೆರಡು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ಮಣ್ಣು ಸಡಿಲಗೊಂಡು ರಸ್ತೆ ಕುಸಿದಿದೆ ಎನ್ನಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸ್ಥಳೀಯ ಆಡಳಿತದ ವಿರುದ್ಧ ಟೀಕೆಗಳು ಕೇಳಿಬರುತ್ತಿವೆ. ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಅಂದರೆ ಬುಧವಾರ ಬೆಳಗ್ಗೆ 8:30 ರವರೆಗೆ ದೆಹಲಿಯಲ್ಲಿ 0.2 ಮಿ.ಮೀ ಮಳೆ ದಾಖಲಾಗಿದೆ. ಮೋಹನ್​ ಗುಪ್ತಾ ಎಂಬವರು ದೆಹಲಿ ಉತ್ತಮವಾಗಿದೆ ಎಂದು ವ್ಯಂಗ್ಯವಾಗಿ ಟೀಕಿಸಿ ವಿಡಿಯೋ ಟ್ಯಾಗ್​ ಮಾಡಿದ್ದಾರೆ. 

ಇದನ್ನೂ ಓದಿ: Dakshina Kannada Rain: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗೆ ಓರ್ವ ಬಲಿ: ರೆಡ್ ಅಲರ್ಟ್, ಶಾಲೆಗಳಿಗೆ ರಜೆ ಘೋಷಣೆ

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.