KRS Reservoir: 108 ಅಡಿ ತಲುಪಿದ ಕೆಆರ್‌ಎಸ್ ಅಣೆೆಕಟ್ಟೆ ನೀರಿನ ಮಟ್ಟ: ರೈತರು ಖುಷ್ - KRS Dam Water level reached 108 feet
🎬 Watch Now: Feature Video
ಮಂಡ್ಯ: ಜಿಲ್ಲೆಯ ಜೀವನದಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ, ಕೃಷ್ಣರಾಜ ಜಲಾಶಯಕ್ಕೆ ಯಥೇಚ್ಚವಾಗಿ ಮಳೆ ನೀರು ಹರಿದು ಬರುತ್ತಿದೆ. ಕಾವೇರಿ ಕೊಳ್ಳದ ರೈತರಲ್ಲಿ ವರ್ಷಧಾರೆ ಸಂತಸ ಉಂಟುಮಾಡಿದೆ. ಕೆಆರ್‌ಎಸ್ ಡ್ಯಾಂನ ನೀರಿನ ಮಟ್ಟ ಮತ್ತಷ್ಟು ಏರಿಕೆಯಾಗಿದ್ದು ಇಂದು 108 ಅಡಿ ತಲುಪಿದೆ. ಒಳಹರಿವಿನ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ಬುಧವಾರ 50 ಸಾವಿರ ಕ್ಯೂಸೆಕ್ ದಾಟಿದ್ದ ಒಳಹರಿವು ಇಂದು 40,341 ಕ್ಯೂಸೆಕ್ಗೆ ಇಳಿಕೆಯಾಗಿದೆ.
124.80 ಅಡಿ ಗರಿಷ್ಠ ಮಟ್ಟದ ಡ್ಯಾಂನಲ್ಲಿ ಸದ್ಯ 108.18 ಅಡಿ ನೀರು ಸಂಗ್ರಹವಿದೆ. ಒಳಹರಿವು ಸ್ವಲ್ಪ ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ಹೊರಹರಿವು ನೀರಿನ ಪ್ರಮಾಣವನ್ನು ಕಾವೇರಿ ನೀರಾವರಿ ನಿಗಮ ಇಳಿಸಿದೆ. 5,400 ಕ್ಯೂಸೆಕ್ನಿಂದ 4,106 ಕ್ಯೂಸೆಕ್ಗೆ ಹೊರಹರಿವು ಪ್ರಮಾಣ ಇಳಿಸಲಾಗಿದೆ. ಕೆಆರ್‌ಎಸ್ ಸಂಪೂರ್ಣ ಭರ್ತಿ ಸಾಮರ್ಥ್ಯ 49.452 ಟಿಎಂಸಿ. ಸದ್ಯ 29.931 ಟಿಎಂಸಿ ನೀರಿದೆ. ನಾಳೆ ವೇಳೆಗೆ 110 ಅಡಿ ನೀರು ಸಂಗ್ರಹವಾಗುವ ಸಾಧ್ಯತೆ ಇದೆ.
ಇದನ್ನೂ ನೋಡಿ: ನಂಜನಗೂಡಿನಲ್ಲಿ ಸ್ನಾನಘಟ್ಟ ಮುಳುಗಡೆ; ಡ್ರೋನ್ ಕಣ್ಣಿನಲ್ಲಿ ಕಬಿನಿ ಜಲಾಶಯದ ದೃಶ್ಯ- ವಿಡಿಯೋ