ಕಾರಿನ ಬಾನೆಟ್ಗೆ ನುಗ್ಗಿದ ಕಾಳಿಂಗ.. 4 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ - ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ
🎬 Watch Now: Feature Video
ಕಾರಿನ ಬಾನೆಟ್ ಒಳಗೆ ನುಗ್ಗಿದ ಕಾಳಿಂಗ ಸರ್ಪವೊಂದನ್ನ ಅರಣ್ಯ ಇಲಾಖೆಯ ಸಿಬ್ಬಂದಿಯು ಸತತ 4 ಗಂಟೆ ಕಾರ್ಯಾಚರಣೆ ನಡೆಸಿ ರಕ್ಷಿಸಿದ ಘಟನೆ ಕಾರವಾರದ ಮಲ್ಲಾಪುರದ ಬಳಿ ನಡೆದಿದೆ. ಜೈ ಸಿಂಗ್ ಎಂಬುವರು ತಮ್ಮ ಕಾರಿನಲ್ಲಿ ಕೈಗಾದಿಂದ ಕಾರವಾರಕ್ಕೆ ತೆರಳುತ್ತಿದ್ದರು. ಕೆಲಸದ ಕಾರಣದಿಂದಾಗಿ ಮಲ್ಲಾಪುರ ಬಳಿ ಕಾರು ನಿಲ್ಲಿಸಿದ್ದಾರೆ. ಈ ವೇಳೆ 10 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕಾರಿನ ಬಾನೆಟ್ ಒಳಗೆ ನುಗ್ಗಿದ್ದು, ಇದನ್ನು ಗಮನಿಸಿದ ಜೈ ಸಿಂಗ್ ಅವರು ಅರಣ್ಯ ಇಲಾಖೆ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಸತತ 4 ಗಂಟೆ ರಕ್ಷಣಾ ಕಾರ್ಯಚರಣೆ ನಡೆಸಿದರು. ಬಳಿಕ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯಕ್ಕೆ ಬಿಟ್ಟರು.
Last Updated : Feb 3, 2023, 8:36 PM IST