ದೆಹಲಿ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಗಮನಸೆಳೆದ 'ಕರ್ನಾಟಕದ ನಾರಿಶಕ್ತಿ'- ವಿಡಿಯೋ - ದೆಹಲಿಯ ಕರ್ತವ್ಯ ಪಥ್
🎬 Watch Now: Feature Video
ನವದೆಹಲಿ: ದೆಹಲಿಯ ಕರ್ತವ್ಯ ಪಥದಲ್ಲಿ ಇಂದು ನಡೆದ ಗಣತಂತ್ರ ದಿನಾಚರಣೆಯ ಪರೇಡ್‍ನಲ್ಲಿ ದೇಶದ ವಿವಿಧ ರಾಜ್ಯಗಳ ಸ್ತಬ್ಧಚಿತ್ರಗಳು ಗಮನಸೆಳೆದವು. ಇದೇ ಸಂದರ್ಭದಲ್ಲಿ ಕರ್ನಾಟಕದ ನಾರಿಶಕ್ತಿಯನ್ನು ಬಿಂಬಿಸುವ ವಿಶೇಷ ಸ್ತಬ್ಧಚಿತ್ರದ ಪ್ರದರ್ಶನ ನಡೆಯಿತು. ರಾಜ್ಯದ ಮಾದರಿ ಮಹಿಳೆಯರಾದ ಸೂಲಗಿತ್ತಿ ನರಸಮ್ಮ, ತುಳಸಿ ಗೌಡ ಹಾಗೂ ಸಾಲು ಮರದ ತಿಮ್ಮಕ್ಕ ಅವರ ಪ್ರತಿಕೃತಿಗಳನ್ನು ಹೊಂದಿದ ಸ್ತಬ್ಧಚಿತ್ರ ಹೊತ್ತ ವಾಹನ ಕರ್ತವ್ಯ ಪಥದಲ್ಲಿ ಸಾಗಿ ಚಪ್ಪಾಳೆ ಗಿಟ್ಟಿಸಿತು. 8,000 ಗಿಡಗಳನ್ನು ನೆಟ್ಟಿರುವ ತುಮಕೂರಿನ ಗುಬ್ಬಿಯ ಹಸಿರು ಯೋಧೆ ಸಾಲುಮರದ ತಿಮ್ಮಕ್ಕ, 30,000ಕ್ಕೂ ಹೆಚ್ಚು ಸಸಿಗಳನ್ನು ನೆಟ್ಟ ಉತ್ತರ ಕನ್ನಡದ ಅಂಕೋಲಾದ ತುಳಸಿಗೌಡ ಹಾಗೂ 70 ವರ್ಷಗಳಲ್ಲಿ ಉಚಿತವಾಗಿ 2,000ಕ್ಕೂ ಹೆಚ್ಚು ಸಾಂಪ್ರದಾಯಿಕ ಹೆರಿಗೆ ಮಾಡಿಸಿರುವ ಸೂಲಗಿತ್ತಿ ಪಾವಗಡದ ನರಸಮ್ಮ ಅವರ ಸಾಧನೆಯನ್ನು ಗುಣಗಾನ ಮಾಡುತ್ತಾ ಕಲಾವಿದರು ಹೆಜ್ಜೆ ಹಾಕಿದರು.