'ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ' : ಕಂಗನಾ ರಣಾವತ್ - ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ

🎬 Watch Now: Feature Video

thumbnail

By ETV Bharat Karnataka Team

Published : Nov 3, 2023, 10:42 PM IST

ದ್ವಾರಕಾ (ಗುಜರಾತ್) : ಬಾಲಿವುಡ್ ನಟಿ - ನಿರ್ಮಾಪಕಿ ಕಂಗನಾ ರಣಾವತ್ ಅವರು ಗುಜರಾತ್‌ನ ಶ್ರೀಕೃಷ್ಣನ ದ್ವಾರಕಾಧೀಶ ದೇವಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತಮ್ಮ ಚುನಾವಣಾ ರಾಜಕೀಯದ ಸಂಭಾವ್ಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ. ಬಲಪಂಥೀಯ ಸಿದ್ಧಾಂತ ಮತ್ತು ಪ್ರಸ್ತುತ ಬಿಜೆಪಿ ಸರ್ಕಾರದ ಪರ ನಿಲುವು ಹೊಂದಿರುವುದರಿಂದ ಈ ಹೇಳಿಕೆ ಚರ್ಚೆಗೆ ಕಾರಣವಾಗಿದೆ. 

ನವೆಂಬರ್ 2 ರಂದು ದೇವಸ್ಥಾನಕ್ಕೆ ಭೇಟಿ ನೀಡಿದ ವೇಳೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಯೋಜಿಸಿದ್ದೀರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಶ್ರೀಕೃಷ್ಣ ಆಶೀರ್ವದಿಸಿದರೆ, ನಾನು ಹೋರಾಡುತ್ತೇನೆ ಎಂದಿದ್ದಾರೆ. ಇದೇ ವೇಳೆ 600 ವರ್ಷಗಳ ಹೋರಾಟದ ನಂತರ ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹವನ್ನು ಪ್ರತಿಷ್ಠಾಪಿಸುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ದೇವಾಲಯ ನಿರ್ಮಾಣದಲ್ಲಿ ಪಕ್ಷದ ಪಾತ್ರವನ್ನು ಅವರು ಇದೇ ವೇಳೆ ಶ್ಲಾಘಿಸಿದರು.  

"ಬಿಜೆಪಿ ಸರ್ಕಾರದ ಪ್ರಯತ್ನದಿಂದ ನಾವು ಭಾರತೀಯರು 600 ವರ್ಷಗಳ ಹೋರಾಟದ ನಂತರ ಈ ದಿನವನ್ನು ನೋಡುತ್ತಿದ್ದೇವೆ. ನಾವು ದೇವಾಲಯವನ್ನು ಅತ್ಯಂತ ಸಂಭ್ರಮದಿಂದ ಸ್ಥಾಪಿಸುತ್ತೇವೆ." ಈ ಸಾಧನೆಯನ್ನು ಆಚರಿಸುವ ಮತ್ತು ಸನಾತನ ಧರ್ಮವನ್ನು ವಿಶ್ವಾದ್ಯಂತ ಪ್ರಚಾರ ಮಾಡುವ ಮಹತ್ವವನ್ನು ಒತ್ತಿಹೇಳಿದ ನಟಿ, "ಸನಾತನ ಧರ್ಮದ ಧ್ವಜವನ್ನು ಪ್ರಪಂಚದಾದ್ಯಂತ ಹಾರಿಸಬೇಕು'' ಎಂದರು.

ಇದನ್ನೂ ಓದಿ: ನಟಿ ಕಂಗನಾ ರಣಾವತ್​ರಿಂದ ಸೋಮನಾಥ ಮಹಾದೇವನ ದರ್ಶನ - ವಿಡಿಯೋ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.