200 ಕೋಟಿ ವಂಚನೆ ಪ್ರಕರಣ: ಮಾರ್ಚ್ 31ರ ವರೆಗೆ ಸುಕೇಶ್ ನ್ಯಾಯಾಂಗ ಬಂಧನ ವಿಸ್ತರಣೆ - Money laundering case
🎬 Watch Now: Feature Video
ನವದೆಹಲಿ: 200 ಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಆರೋಪಿ ಸುಕೇಶ್ ಚಂದ್ರಶೇಖರ್, ಪ್ರಕರಣವನ್ನು ಬೇರೆ ನ್ಯಾಯಾಧೀಶರಿಗೆ ವರ್ಗಾಯಿಸುವಂತೆ ಅರ್ಜಿ ಸಲ್ಲಿಸಿದ್ದ. "ನ್ಯಾಯಾಧೀಶರು ಪಕ್ಷಪಾತ ತೋರಿದ್ದಾರೆ" ಎಂದು ಈ ವೇಳೆ ಆರೋಪಿಸಿದ್ದ. ಇದೀಗ, ಆರೋಪಿಯ ಅರ್ಜಿಯನ್ನು ಆಲಿಸಲು ಪಟಿಯಾಲ ಹೌಸ್ ಕೋರ್ಟ್ ನಿರಾಕರಿಸಿದೆ.
ಸುಕೇಶ್ ಅರ್ಜಿ ಸಲ್ಲಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪಟಿಯಾಲ ಹೌಸ್ ಕೋರ್ಟ್, ನ್ಯಾಯಾಧೀಶರ ಬಗ್ಗೆ ಪ್ರತಿಕ್ರಿಯಿಸುವ ಹಕ್ಕು ಆರೋಪಿಗೆ ಇಲ್ಲ ಎಂದು ಹೇಳಿದೆ. ಜೊತೆಗೆ, ಸುಕೇಶ್ ಚಂದ್ರಶೇಖರ್ ನ್ಯಾಯಾಂಗ ಬಂಧನವನ್ನು ಮಾರ್ಚ್ 31 ರವರೆಗೆ ವಿಸ್ತರಿಸಿದೆ.
ಇದನ್ನೂ ಓದಿ: ದೆಹಲಿ ಮದ್ಯ ಹಗರಣದ ಕುರಿತು ಸುಕೇಶ್ ಚಂದ್ರಶೇಖರ್ ಸ್ಫೋಟಕ ಹೇಳಿಕೆ
ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆ : ಇನ್ನು ಕಳೆದ ತಿಂಗಳ ಫೆ. 23 ರಂದು ಬಹುಕೋಟಿ ವಂಚಕ ಸುಕೇಶ್ ಚಂದ್ರಶೇಖರ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆಯಾಗಿದ್ದವು. ದೆಹಲಿ ಕಾರಾಗೃಹ ಇಲಾಖೆಯು ದಾಳಿ ನಡೆಸಿದ ವೇಳೆ 1 ಲಕ್ಷಕ್ಕೂ ಹೆಚ್ಚು ಮೌಲ್ಯದ ಚಪ್ಪಲಿಗಳು ಮತ್ತು ಎರಡು ದುಬಾರಿ ಜೀನ್ಸ್ ಲಭ್ಯವಾಗಿತ್ತು.
ಇದನ್ನೂ ಓದಿ: ಬಹುಕೋಟಿ ವಂಚಕ ಸುಕೇಶ್ ಜೈಲಿನ ಕೊಠಡಿಯಲ್ಲಿ ಐಷಾರಾಮಿ ವಸ್ತುಗಳು ಪತ್ತೆ