ಹುಟ್ಟೂರಿನಲ್ಲಿ ಜಿ.ಟಿ.ದೇವೇಗೌಡ ಮತ ಪ್ರಚಾರ, ತಮಟೆ ಸದ್ದಿಗೆ ಡ್ಯಾನ್ಸ್- ವಿಡಿಯೋ - Karnataka Election 2023
🎬 Watch Now: Feature Video
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಜಿ.ಟಿ.ದೇವೇಗೌಡ ಅವರು ತಮ್ಮ ಹುಟ್ಟೂರಿನಲ್ಲಿ ಮತಯಾಚನೆ ನಡೆಸಿದರು. ಈ ವೇಳೆ ತಮಟೆ ಸೌಂಡ್ಗೆ ಕುಣಿದು ಕುಪ್ಪಳಿಸಿದರು. ಜಿಟಿಡಿ ಹುಟ್ಟೂರು ಗುಂಗ್ರಾಲ್ ಛತ್ರ ಗ್ರಾಮ ಪ್ರವೇಶಿಸುತ್ತಿದ್ದಂತೆ ಮಹಿಳೆಯರು ಪೂರ್ಣಕುಂಭ ಸ್ವಾಗತ ನೀಡಿದರು.
ಊರ ಜನರು ಹೂ ಮಳೆ ಸುರಿಸಿ, ಪಟಾಕಿ ಸಿಡಿಸಿ ಜೈಕಾರದ ಘೋಷಣೆಗಳನ್ನು ಕೂಗಿದರು. ಹಿರಿಯಜ್ಜಿ ತುಳಸಮ್ಮ ಎಂಬವರು, 'ಗುಂಗ್ರಾಲ್ ಛತ್ರದ ಮಗ ನೀನು, ನೀನು ಗೆದ್ದು ಬರ್ತೀಯಾ' ಎಂದು ಹಣೆಗೆ ಕುಂಕುಮ ಇಟ್ಟು ಆಶೀರ್ವದಿಸಿದರು.
ಕಳೆದ 10 ವರ್ಷಗಳಿಂದ ಕ್ಷೇತ್ರದಲ್ಲಿ ನಿರಂತರವಾಗಿ ಹಗಲಿರುಳು ಶ್ರಮಿಸುತ್ತಿದ್ದು, ಈಗಾಗಲೇ ಬಹುತೇಕ ಕೆಲಸಗಳು ಮುಗಿದಿವೆ. ಇನ್ನುಳಿದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಬೆಂಬಲಿಸುವಂತೆ ಜಿಟಿಡಿ ಮತದಾರರಲ್ಲಿ ಮನವಿ ಮಾಡಿದರು. ಇಲವಾಲ ಹೋಬಳಿಯ ರಾಮನಹಳ್ಳಿ, ಸಾಗರಕಟ್ಟೆ, ಹೊಸಕೋಟೆ, ಯಾಚೆ ಗೌಡನಹಳ್ಳಿ, ಹನುಮಂತಪುರ, ಛತ್ರದ ಕೊಪ್ಪಲು, ಗುಂಗ್ರಾಲ್ ಛತ್ರ ಹಾಗೂ ಯಲಚಹಳ್ಳಿ ಗ್ರಾಮಗಳಲ್ಲಿ ಅವರು ಚುನಾವಣಾ ಪ್ರಚಾರ ನಡೆಸಿದರು.
1972 ರಿಂದಲೂ ಇಲವಾಲ ಹೋಬಳಿಯ ಜನರು ನನಗೆ ರಾಜಕೀಯವಾಗಿ ಆಶೀರ್ವಾದ ಮಾಡಿದ್ದರಿಂದ ಈ ಮಟ್ಟಕ್ಕೆ ಬಂದಿದ್ದೇನೆ. ಈಗಲೂ ಕೈ ಹಿಡಿದು ಮುನ್ನಡೆಸಿ ಎಂದು ಪ್ರಚಾರ ಸಂದರ್ಭದಲ್ಲಿ ಕೋರಿದರು.
ಇದನ್ನೂ ಓದಿ: ಮತ ಕೇಳಲು ಬಂದ ಶಾಸಕ ಮಹೇಶ್ಗೆ ಜನರ ತರಾಟೆ: ಪ್ರತಿಮೆಗೆ ಹಾರ ಹಾಕಲು ಅವಕಾಶ ನೀಡದ ಜನ