ಮೈಸೂರಿನಲ್ಲಿ ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಮತದಾನ - Etv Bharat Kannada
🎬 Watch Now: Feature Video

ಮೈಸೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ರಾಜ್ಯಾದ್ಯಂತ ಮತದಾನ ನಡೆಯುತ್ತಿದೆ. ರಾಜಕೀಯ ನಾಯಕರು, ಕ್ರೀಡಾಪಟುಗಳು, ಸಿನಿಮಾ ಮಂದಿ ಸೇರಿದಂತೆ ಯುವ ಮತದಾರರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾವಣೆ ಮಾಡುತ್ತಿದ್ದಾರೆ. ಭಾರತದ ಮಾಜಿ ಕ್ರಿಕೆಟರ್ ಜಾವಗಲ್ ಶ್ರೀನಾಥ್ ಕೂಡ ಮೈಸೂರಿನ ಮತಗಟ್ಟೆಯಲ್ಲಿ ಮತದಾನ ಮಾಡಿದರು.
ಹಕ್ಕು ಚಲಾಯಿಸಿದ ಬಳಿಕ ಮಾತನಾಡಿದ ಅವರು, "ಒಳ್ಳೆಯ ಪ್ರಜಾಪ್ರಭುತ್ವಕ್ಕಾಗಿ ಜನರು ಮತ ಚಲಾಯಿಸಿ ಉತ್ತಮ ನಾಯಕನನ್ನು ಆಯ್ಕೆ ಮಾಡಲು ವಿನಂತಿಸುತ್ತೇನೆ. ನಾನು ಸಹ ಮತ ಹಾಕಿದ್ದೇನೆ. ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಬೇಕು" ಎಂದು ಕರೆ ಕೊಟ್ಟರು.
ಮೊದಲ ಬಾರಿಗೆ ವಿಧಾನಸಭೆ ಚುನಾವಣೆಯಲ್ಲಿ ಮತ ಚಲಾಯಿಸುವವರಿಗೆ ಇದೊಂದು ಸುವರ್ಣಾವಕಾಶ. ಹಾಗಾಗಿ ಯಾರು ಉತ್ತಮ?, ಕ್ಷೇತ್ರಕ್ಕೆ ಯಾವ ಅಭ್ಯರ್ಥಿ ಬೇಕು ಎಂದು ನಿರ್ಣಯ ಮಾಡಬೇಕು. ಯುವ ಮತದಾರರು ತುಂಬ ಪ್ರಜ್ಞಾವಂತರಾಗಿದ್ದಾರೆ. ಯೋಚನೆ ಮಾಡಿ ಸೂಕ್ತ ಅಭ್ಯರ್ಥಿಗೆ ಮತ ಚಲಾಯಿಸಿ ಎಂದು ಅವರು ಕರೆ ನೀಡಿದರು. ಜಾವಗಲ್ ಶ್ರೀನಾಥ್ ಪ್ರಸ್ತುತ ಐಸಿಸಿ ಮ್ಯಾಚ್ ರೆಫರಿ ಆಗಿದ್ದಾರೆ.
ಇದನ್ನೂ ಓದಿ: 'ದಯವಿಟ್ಟು ನಮ್ಮಿಂದ ಕಲಿಯಿರಿ'.. ಯುವ ಮತದಾರರಿಗೆ ಸಂದೇಶ ನೀಡಿದ ಸುಧಾ ಮೂರ್ತಿ