ಹುಟ್ಟೂರಿಗೆ ಭೇಟಿ ನೀಡಿ ಮಳೆ ಅನಾಹುತ ಪರಿಶೀಲಿಸಿದ ರಾಜ್ಯಸಭೆ ಸದಸ್ಯ ಜಗ್ಗೇಶ್ - Tumkur rain effected areas
🎬 Watch Now: Feature Video
ತುಮಕೂರು: ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿ ಭಾರಿ ಅವಾಂತರ ಸೃಷ್ಟಿಯಾಗಿದೆ. ರಾಜ್ಯಸಭಾ ಸದಸ್ಯ, ನಟ ಜಗ್ಗೇಶ್ ತಮ್ಮ ಹುಟ್ಟೂರು ಮಾಯಸಂದ್ರ ಗ್ರಾಮಕ್ಕೆ ಭೇಟಿ ನೀಡಿ ಮಳೆಯಿಂದಾದ ಹಾನಿ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಹಾರದ ಬಗ್ಗೆ ಚರ್ಚಿಸಿದರು. ಇತ್ತೀಚಿಗಷ್ಟೇ ಮಾಯಸಂದ್ರ ಗ್ರಾಮದಲ್ಲಿರುವ ತಮ್ಮ ತೋಟದ ಮನೆಗೆ ನೀರು ನುಗ್ಗಿದ್ದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವರು ತಿಳಿಸಿದ್ದರು. ಮಾಯಸಂದ್ರ ಗ್ರಾಮದ ಸರ್ಕಾರಿ ಶಾಲೆಗೂ ಹಾನಿ ಆಗಿದ್ದು, ಅಧಿಕಾರಿಗಳೊಂದಿಗೆ ಜಗ್ಗೇಶ್ ಮಾತುಕತೆ ನಡೆಸಿದ್ದಾರೆ.
Last Updated : Feb 3, 2023, 8:27 PM IST