ಗಂಡು ಮೆಟ್ಟಿದ ನಾಡಿನಲ್ಲಿ ಗಂಡು ಮಕ್ಕಳ ಹಬ್ಬ: ವಿಶಿಷ್ಠತೆ ಪಡೆದುಕೊಂಡ ಜಗ್ಗಲಗಿ ಸಂಭ್ರಮ - jaggalagi festival celebration at hubballi
🎬 Watch Now: Feature Video
ಹುಬ್ಬಳ್ಳಿ : ಹೋಳಿ ಹಬ್ಬದ ಸಂಭ್ರಮ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವಿಶಿಷ್ಟ ರೀತಿಯಲ್ಲಿ ಚಿಗುರೊಡೆಯುತ್ತಿದೆ. ಹೋಳಿ ಹಬ್ಬದ ಪ್ರಯುಕ್ತವಾಗಿ ಆಯೋಜಿಸಲಾಗಿದ್ದ ಹುಬ್ಬಳ್ಳಿಯ ಜಗ್ಗಲಗಿ ಹಬ್ಬ ವಿನೂತನ ರೀತಿಯಲ್ಲಿ ಝಗಮಗಿಸಿತು.
ಹೌದು, ಗಂಡುಮೆಟ್ಟಿನ ನಾಡು ಎಂದೇ ಖ್ಯಾತಿ ಪಡೆದ ಹುಬ್ಬಳ್ಳಿಯಲ್ಲಿ ಜಗ್ಗಲಿಗೆ ಹಬ್ಬವು ವಿಶಿಷ್ಟ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಲಾಯಿತು. 2016ರಿಂದ ಪ್ರಾರಂಭಗೊಂಡಿರುವ ಜಗ್ಗಲಗಿ ಹಬ್ಬಕ್ಕೆ ಧಾರವಾಡ ಜಿಲ್ಲೆಯ ವಿವಿಧ ಭಾಗಗಳಿಂದ ಕಲಾವಿದರು ಆಗಮಿಸಿ ಜಗ್ಗಲಗಿ ಹಬ್ಬಕ್ಕೆ ಮೆರುಗು ನೀಡಿದರು. ಮೂರು ಸಾವಿರ ಮಠದ ಆವರಣದಲ್ಲಿ ಆಯೋಜಿಸಲಾಗಿದ್ದ ಜಗ್ಗಲಗ್ಗಿ ಹಬ್ಬಕ್ಕೆ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸೇರಿದಂತೆ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿದ ಸ್ವಾಮೀಜಿಗಳು ವೈಭವದ ಚಾಲನೆ ನೀಡಿದರು.
ಮೂರುಸಾವಿರ ಮಠದಿಂದ ಪ್ರಾರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಜಗ್ಗಲಗಿ ಹಬ್ಬ ವಿಶಿಷ್ಟ ರೀತಿಯಲ್ಲಿ ಜರುಗಿತು. ಮೆರವಣಿಗೆ ಉದ್ದಕ್ಕೂ ಬ್ಯಾಹಟ್ಟಿ, ರಾಯನಾಳ, ಹುಬ್ಬಳ್ಳಿ, ಕುಸುಗಲ್, ಕಮಡೊಳ್ಳಿ, ಬೆಳಗಾವಿ ಜಿಲ್ಲೆಯ ಜಗ್ಗಲಗಿ ತಂಡದ ಮಹಿಳಾ ಹಾಗೂ ಪುರುಷ ಕಲಾವಿದರು ಕೂಡ ತಮ್ಮ ಜಗ್ಗಲಗಿ ಹಾಗೂ ಹಲಗೆ ವಾದನದಿಂದ ಹಬ್ಬದ ಕಳೆಯನ್ನು ಚಿಗುರೊಡೆಯುವಂತೆ ಮಾಡಿದ್ದು, ಸಾರ್ವಜನಿಕರನ್ನು ಮನಸೂರೆಗೊಳ್ಳುವಂತೆ ಮಾಡಿತು. ಮೆರವಣಿಗೆ ಉದ್ದಕ್ಕೂ ಕಲಾವಿದರು ತಾಳಬದ್ಧವಾಗಿ ಹಲಗೆ ಬಾರಿಸುತ್ತಾ ಕುಣಿದು ಸಂಭ್ರಮಿಸಿದ್ರು. ರಸ್ತೆಯ ಇಕ್ಕೆಲಗಳಲ್ಲಿ ನಿಂತ ಜನರು ಕನ್ನಡ ನಾಡಿನ ಕಲೆಯನ್ನ ಕಣ್ತುಂಬಿಕೊಂಡ್ರೆ, ಹಾನಗಲ್ಲಿನ ಬೇಡರ ವೇಷ ತಂಡ ಎಲ್ಲರ ಗಮನ ಸೆಳೆಯಿತು.
ಇದನ್ನೂ ಓದಿ : ವಿಜಯನಗರ: ಅಮೆರಿಕ ಪುರಾತತ್ವಶಾಸ್ತ್ರಜ್ಞನ ಅಸ್ತಿ ಹಂಪಿಯ ತುಂಗಭದ್ರಾ ನದಿಯಲ್ಲಿ ವಿಸರ್ಜನೆ