ನೀರೊಳಗಿನ ಗುರಿ ಭೇದಿಸಿದ ಸ್ವದೇಶಿ ನಿರ್ಮಿತ ಹೆವಿವೇಟ್ ಟಾರ್ಪಿಡೊ: ವಿಡಿಯೋ - ಭಾರತೀಯ ನೌಕಾಪಡೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/640-480-18685676-thumbnail-16x9-don1.jpg)
ನವದೆಹಲಿ: ಭಾರತೀಯ ನೌಕಾಪಡೆ ಸಶಸ್ತ್ರ ಉತ್ಪಾದನೆಯಲ್ಲಿ ಮತ್ತೊಂದು ಮೈಲಿಗಲ್ಲು ಸಾಧಿಸಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಹೆವಿ ವೇಟ್ ಟಾರ್ಪಿಡೊವನ್ನು ಮಂಗಳವಾರ ನೀರೊಳಗಿನ ಗುರಿ ಉಡಾಯಿಸುವ ಪ್ರಯೋಗ ಯಶಸ್ವಿಯಾಗಿದೆ.
'ಭಾರತೀಯ ನೌಕಾಪಡೆಯ ಮತ್ತು ಡಿಆರ್ಡಿಒ ಸಹಭಾಗಿತ್ವದಲ್ಲಿ ಈ ಸಾಧನ ಅಭಿವೃದ್ಧಿಪಡಿಸಲಾಗಿದೆ. ಇದು ಸಮುದ್ರದೊಳಗೆ ಶತೃ ಸಾಧನಗಳನ್ನು ನಿಖರ ಗುರಿಯೊಂದಿಗೆ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಈ ಬಲಿಷ್ಠ ಟಾರ್ಪಿಡೋವನ್ನು ಸ್ಥಳೀಯವಾಗಿ ನಿರ್ಮಿಸಲಾಗಿದ್ದು, ಮಹತ್ವದ ಸಾಧನೆ' ಎಂದು ಎಂದು ಭಾರತೀಯ ನೌಕಾಪಡೆ ಹೇಳಿದೆ.
ಹಿಂದೂ ಮಹಾಸಾಗರದಲ್ಲಿ ಚೀನಾದಿಂದ ಹೆಚ್ಚುತ್ತಿರುವ ಬೆದರಿಕೆಯ ಹಿನ್ನೆಲೆಯಲ್ಲಿ ಭಾರತೀಯ ನೌಕಾಪಡೆಯು ತೀವ್ರ ನಿಗಾ ವಹಿಸಿದ್ದು, ಈ ಹಿನ್ನೆಲೆಯಲ್ಲಿ ಕೆಲವು ಸಿದ್ಧತೆಗಳನ್ನು ನಡೆಸಿದೆ. ಇದರ ಭಾಗವಾಗಿ ನೀರಿನೊಳಗಿನ ವಸ್ತುವನ್ನು ಯಶಸ್ವಿಯಾಗಿ ನಾಶಪಡಿಸುವ ಸ್ವದೇಶಿ ನಿರ್ಮಿತ ಟಾರ್ಪಿಡೊ ಯಶಸ್ವಿ ಪ್ರಯೋಗದ ವಿಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದೆ.
ಇದಕ್ಕೂ ಮೊದಲು ದೇಶೀಯವಾಗಿ ತಯಾರಿಸಿರುವ MH60 "ರೋಮಿಯೋ" ಹೆಲಿಕಾಪ್ಟರ್ ಅನ್ನು ಕೆಲ ದಿನಗಳ ಹಿಂದಷ್ಟೇ ಹಾರಾಟ ನಡೆಸಿ ಐಎನ್ಎಸ್ ವಿಕ್ರಾಂತ್ ಮೇಲೆ ಯಶಸ್ವಿಯಾಗಿ ಮೊದಲ ಲ್ಯಾಂಡಿಂಗ್ ಮಾಡಲಾಗಿತ್ತು.
ಇದನ್ನೂ ಓದಿ: ಕೊಡಗು: ಸರ್ಕಾರಿ ಶಾಲೆಯಲ್ಲಿ ಸದ್ದಿಲ್ಲದೇ ನಡೆಯುತ್ತಿರುವ "ಫಲ ವೃಕ್ಷ ಕ್ರಾಂತಿ"