ಕಗ್ಗತ್ತಲಿನಲ್ಲಿ ಭಾರತೀಯ ಕೋಸ್ಟ್ ಗಾರ್ಡ್​ನಿಂದ ಕಾರ್ಯಾಚರಣೆ: ಚೀನಾ ಪ್ರಜೆಯ ರಕ್ಷಣೆ - evacuated a Chinese national from Panama

🎬 Watch Now: Feature Video

thumbnail

By

Published : Aug 17, 2023, 11:47 AM IST

ನವದೆಹಲಿ: ಸವಾಲಿನ ಹವಾಮಾನ ಪರಿಸ್ಥಿತಿ ಮತ್ತು ಕಗ್ಗತ್ತಲಿನ ನಡುವೆಯೇ ಭಾರತೀಯ ಕೋಸ್ಟ್ ಗಾರ್ಡ್ ಧೈರ್ಯಶಾಲಿ ಕಾರ್ಯಾಚರಣೆ ನಡೆಸಿದೆ. ಪನಾಮ ಫ್ಲ್ಯಾಗ್ಡ್ ರಿಸರ್ಚ್ ವೆಸೆಲ್ ಎಂವಿ ಡಾಂಗ್ ಫಾಂಗ್ ಕಾನ್ ಟಾನ್ ನಂ.2ರ ಪ್ರದೇಶದಲ್ಲಿ ಬುಧವಾರ ಚೀನಾದ ಪ್ರಜೆಯನ್ನು ರಕ್ಷಿಸಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಪನಾಮ ಫ್ಲಾಗ್ಡ್ ರಿಸರ್ಚ್ ವೆಸೆಲ್ MV ಡಾಂಗ್ ಫಾಂಗ್ ಕಾನ್ ಟಾನ್ ನಂ 2ರ ಚೀನಾದಿಂದ ಯುಎಇಗೆ ತೆರಳುತ್ತಿದ್ದಾಗ,  ರೋಗಿಯೊಬ್ಬರಿಗೆ ಅಧಿಕ ಬಿಪಿ, ಎದೆನೋವು ಮತ್ತು ಹೃದಯ ಸ್ತಂಭನದ ಲಕ್ಷಣಗಳನ್ನು ಕಾಣಿಸಿಕೊಂಡಿದ್ದವು. ತುರ್ತು ವೈದ್ಯಕೀಯ ಸೇವೆ ಅಗತ್ಯವಿರುವ ಮಾಹಿತಿಯನ್ನು ಭಾರತೀಯ ಕೋಸ್ಟ್ ಗಾರ್ಡ್ ಪಡೆದುಕೊಂಡಿತು. ತಕ್ಷಣವೇ ಹಡಗಿನೊಂದಿಗೆ ಸಂವಹನ ಸ್ಥಾಪಿಸಲಾಯಿತು. ಅಗತ್ಯ ಟೆಲಿಮೆಡಿಸಿನ್ ಸಲಹೆ ಒದಗಿಸಲಾಯಿತು. ತ್ವರಿತ ಸ್ಥಳಾಂತರಿಸುವಿಕೆ ಮತ್ತು ನಂತರದ ವೈದ್ಯಕೀಯ ನಿರ್ವಹಣೆಗಾಗಿ ಅತ್ಯುತ್ತಮ ಕಾರ್ಯಸಾಧ್ಯವಾದ ಆಯ್ಕೆಗಳನ್ನು ಪರಿಗಣಿಸಿ, ರೋಗಿಯನ್ನು ಏರ್​ಲಿಫ್ಟ್ ಮಾಡಲಾಯಿತು ಎಂದು ಭಾರತೀಯ ಕೋಸ್ಟ್ ಗಾರ್ಡ್‌ ಟ್ವೀಟ್​ ಮಾಡಿದೆ.

ಸಿಜಿ ಎಎಲ್ಎಚ್ ಎಂಕೆ- 3 ಹೆಲಿಕಾಪ್ಟರ್​ ಮೂಲಕ ರೋಗಿಯನ್ನು ಹಡಗಿನಿಂದ ಸುರಕ್ಷಿತವಾಗಿ ಸ್ಥಳಾಂತರಿಸಿತು. ರೋಗಿಗೆ ಪ್ರಥಮ ಚಿಕಿತ್ಸೆ ನೀಡಲಾಯಿತು. ನಂತರ ಹೆಚ್ಚಿನ ವೈದ್ಯಕೀಯ ನಿರ್ವಹಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಕತ್ತಲೆಯ ಸಮಯದಲ್ಲಿ ಕೈಗೊಂಡಿರುವ ಕಾರ್ಯಾಚರಣೆ ಮೂಲಕ, ಸಮುದ್ರದಲ್ಲಿ ವಿದೇಶಿ ಪ್ರಜೆಯ ಜೀವವನ್ನು ಉಳಿಸಲು ಸಾಧ್ಯವಾಯಿತು. "ನಾವು ರಕ್ಷಿಸುತ್ತೇವೆ" ಎಂಬ ಧ್ಯೇಯ ವಾಕ್ಯಕ್ಕೆ ಭಾರತೀಯ ಕೋಸ್ಟ್ ಗಾರ್ಡ್‌ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ.

ಇದನ್ನೂ ಓದಿ: Arunachalam: ಲಘು ಯುದ್ಧ ವಿಮಾನಗಳ ಖ್ಯಾತಿಯ ವಿಜ್ಞಾನಿ ಅರುಣಾಚಲಂ ನಿಧನ, ಪ್ರಧಾನಿ ಮೋದಿ ಸಂತಾಪ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.