ODI World Cup 2023: ಈಡನ್ ಗಾರ್ಡನ್ಸ್ ಸ್ಟೇಡಿಯಂಗೆ ಐಸಿಸಿ ತಂಡ ಭೇಟಿ, ಪರಿಶೀಲನೆ - ಈಡನ್​ ಗಾರ್ಡನ್​ ಕ್ರೀಡಾಂಗಣ

🎬 Watch Now: Feature Video

thumbnail

By

Published : Aug 6, 2023, 6:46 PM IST

ಕೋಲ್ಕತ್ತಾ (ಪಶ್ಚಿಮಬಂಗಾಳ) : ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕ್ರಿಕೆಟ್​ ಪಂದ್ಯಾಟಕ್ಕೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್​ ಕೌನ್ಸಿಲ್​​ನ (ಐಸಿಸಿ) ಆರು ಸದಸ್ಯರ ತಂಡ ಇಂದು ಇಲ್ಲಿನ ಈಡನ್​ ಗಾರ್ಡನ್​ ಕ್ರೀಡಾಂಗಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಿದ್ಧತೆ ಮತ್ತು ಸೌಲಭ್ಯಗಳ ಕುರಿತು ಮಾಹಿತಿ ಸಂಗ್ರಹಿಸಿದ ತಂಡ ಸಲಹೆ, ಸೂಚನೆಗಳನ್ನು ನೀಡಿದೆ.

ಬೆಂಗಾಲ್ ಕ್ರಿಕೆಟ್‌ ಅಸೋಸಿಯೇಷನ್​ ಅಧ್ಯಕ್ಷ ಸ್ನೇಹ ಶಿಶ್​ ಮಾತನಾಡಿ, "ಐಸಿಸಿ ತಂಡ ಇಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದ ತೃಪ್ತವಾಗಿದೆ. ಕೆಲವು ಸಲಹೆಗಳನ್ನು ನೀಡಿದ್ದಾರೆ. ಆ ರೀತಿಯಲ್ಲಿ ಕೆಲಸಗಳನ್ನು ನಡೆಸಲಾಗುವುದು. ಕ್ರೀಡಾಂಗಣದ ಕ್ಲಬ್ ಹೌಸ್, ಲಾಬಿ, ಕಾನ್ಫರೆನ್ಸ್ ಹಾಲ್​, ಬಿಸಿಕೆಎಲ್ ಕಾರ್ಪೊರೇಟ್ ಬಾಕ್ಸ್​ಗಳ ನವೀಕರಣ ನಡೆಯುತ್ತಿದೆ" ಎಂದರು.

ಈಡನ್​ ಗಾರ್ಡನ್ಸ್​ ಕ್ರೀಡಾಂಗಣದಲ್ಲಿ 5 ಪಂದ್ಯಗಳು ನಡೆಯಲಿವೆ. ಮೊದಲ ಪಂದ್ಯ ನೆದರ್ಲೆಂಡ್​- ಬಾಂಗ್ಲಾದೇಶ ತಂಡಗಳ ನಡುವೆ ಅಕ್ಟೋಬರ್​ 28ರಂದು ನಿಗದಿಯಾಗಿದೆ. ಅ.31ರಂದು ಪಾಕಿಸ್ತಾನ ಮತ್ತು ಬಾಂಗ್ಲಾ, ನವೆಂಬರ್ 5ರಂದು ಭಾರತ- ದಕ್ಷಿಣ ಆಫ್ರಿಕಾ, ನ.12ರಂದು ಇಂಗ್ಲೆಂಡ್- ಪಾಕಿಸ್ತಾನ ನಡುವೆ ಪಂದ್ಯಾಟವಿದೆ. ಎರಡನೇ ಸೆಮಿಫೈನಲ್ ಪಂದ್ಯ ನ.16ರಂದು ನಡೆಯಲಿದೆ.

ಇದನ್ನೂ ಓದಿ : ಹೊಸಕೋಟೆ: ಬೈಕ್​ಗಳಿಗೆ ಡಿಕ್ಕಿ ಹೊಡೆದು ಮರಕ್ಕೆ ಗುದ್ದಿದ ಕಾರು.. ಸಿಸಿಟಿವಿ ವಿಡಿಯೋ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.