ಮಂತ್ರಾಲಯದಲ್ಲಿ ಹುಂಡಿ ಎಣಿಕೆ ಕಾರ್ಯ; 2.84 ಕೋಟಿ ರೂ. ಹಣ ಸಂಗ್ರಹ
🎬 Watch Now: Feature Video
ರಾಯಚೂರು : ತುಂಗತೀರದಲ್ಲಿ ನೆಲೆಸಿರುವ ಗುರು ಸಾರ್ವಭೌಮ ಶ್ರೀರಾಘವೇಂದ್ರ ಸ್ವಾಮಿಗಳ ದರ್ಶನಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಳವಾಗಿದ್ದು, ಕೋಟ್ಯಂತರ ರೂಪಾಯಿ ಕಾಣಿಕೆ ಸಂಗ್ರಹವಾಗುತ್ತಿದೆ. ಮಂತ್ರಾಲಯದ ಶ್ರೀರಾಘವೇಂದ್ರ ಮಠದಲ್ಲಿ ಕಲ್ಯಾಣ ಮಂಟಪವೊಂದರಲ್ಲಿ 2023 ಜೂನ್ ತಿಂಗಳು ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾಗಿರುವ ಹಣವನ್ನು ಎಣಿಕೆ ಕಾರ್ಯ ನಡೆಸಲಾಯಿತು. ಶ್ರೀಮಠದ ಎಲ್ಲಾ ಕಾಣಿಕೆಗಳಲ್ಲಿ ಭಕ್ತರು ಸಲ್ಲಿಸಿರುವ ಸಂಗ್ರಹವಾಗಿದ್ದ ಕಾಣಿಕೆ ಹುಂಡಿಗಳನ್ನು ತೆಗೆದು ಎಣಿಕೆ ಮಾಡಲಾಯಿತು.
ಒಟ್ಟು 2.84 ಕೋಟಿ ರೂ. ಗಳು ಭಕ್ತರಿಂದ ಕಾಣಿಕೆ ಸಲ್ಲಿಕೆಯಾಗಿದೆ. ಇದರಲ್ಲಿ ವಿವಿಧ ಮೌಲ್ಯದ ನೋಟುಗಳು, 5.83 ಲಕ್ಷ ರೂ. ಮೌಲ್ಯದ ನಾಣ್ಯಗಳು ಮತ್ತು 57 ಗ್ರಾಂ ಬಂಗಾರ, 910 ಗ್ರಾಂ ಬೆಳ್ಳಿ ಆಭರಣಗಳು ರಾಯರಿಗೆ ಕಾಣಕೆ ರೂಪದಲ್ಲಿ ಭಕ್ತರು ಸರ್ಮಪಿಸಿದ್ದಾರೆ. ಈ ಸಂಗ್ರಹವಾದ ಹಣವನ್ನು ಬ್ಯಾಂಕ್ಗೆ ಜಮಾ ಮಾಡಲಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಎಸ್.ಕೆ. ಶ್ರೀನಿವಾಸರಾವ್ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಂಗಳವಾರ ಬೆಳಗ್ಗೆಯಿಂದ ಆರಂಭವಾದ ಕಾಣಿಕೆ ಎಣಿಕೆ ಸಂಜೆಯವರೆಗೂ ನೂರಾರು ಸ್ವಯಂ ಸೇವಕರಿಂದ ನಡೆಯಿತು. ಕಲಿಯುಗದ ಕಾಮಧೇನು ಎಂದು ಭಕ್ತರ ವೃನಮನದಲ್ಲಿ ಮನೆ ಮಾಡಿರುವ ಶ್ರೀರಾಘವೇಂದ್ರ ಸ್ವಾಮಿ ಮಠಕ್ಕೆ, ರಾಯರ ಮೂಲ ಬೃಂದಾವನಕ್ಕೆ ತಮ್ಮ ಇಷ್ಟಾರ್ಥ ಈಡೇರಿಸುವಂತೆ ಪ್ರಾರ್ಥಿಸುತ್ತಾರೆ. ಅಲ್ಲದೇ ಭಕ್ತಿಯಿಂದ ರಾಯರನ್ನು ಬೇಡಿಕೊಂಡರೆ ಇಷ್ಟಾರ್ಥ ಈಡೇರುತ್ತದೆ ಎನ್ನುವ ನಂಬಿಕೆ ಭಕ್ತರಲ್ಲಿದೆ. ಅಲ್ಲದೇ ಇತ್ತೀಚಿಗೆ ರಜೆ ದಿನಗಳಲ್ಲಿ ಹಾಗೂ ರಾಯರ ವಾರವಾಗಿರುವ ಗುರುವಾರದಂದು ಸಹ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ: ಚಂದ್ರಗುತ್ತಿ ದೇವಾಲಯದ ಹುಂಡಿ ಎಣಿಕೆ, ₹29 ಲಕ್ಷ ಸಂಗ್ರಹ