ತಮಟೆ ಸದ್ದಿಗೆ ಮಹಿಳಾ ಪಿಎಸ್ಐ ಸಖತ್ ಡ್ಯಾನ್ಸ್, ಬಣ್ಣ ಎರಚಿ ಸಂಭ್ರಮಿಸಿದ ಡಿಸಿ - ಗಡಿಗೆ ಒಡೆಯುವ ಸ್ಪರ್ಧೆ ಆಯೋಜನೆ
🎬 Watch Now: Feature Video
ಧಾರವಾಡ: ಹೋಳಿ ಹುಣ್ಣಿಮೆಯ ರಂಗ ಪಂಚಮಿಗೆ ಎಲ್ಲೆಡೆ ಜನರ ಬಣ್ಣದಾಟ ಜೋರಾಗಿತ್ತು. ಕಾಮದಹನದ ಬಳಿಕ ವಿದ್ಯಾಕಾಶಿಯ ಮಂದಿ ಸಂಭ್ರಮಿಸಿದರು. ಮಹಿಳಾ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ತಮಟೆ ಸದ್ದಿಗೆ ಡ್ಯಾನ್ಸ್ ಮಾಡಿದರು. ಅಣ್ಣಿಗೇರಿ ಪಟ್ಟಣದಲ್ಲಿ ಪಿಎಸ್ಐ ಉಮಾದೇವಿ ಸ್ಟೆಪ್ಗೆ ಜನರು ಕೇಕೆ ಹಾಕಿದ್ದಾರೆ. ಪಟ್ಟಣದ ಕುರಬಗೇರಿ ಓಣಿಯಲ್ಲಿ ರಂಜಿಸಿದ ಅಧಿಕಾರಿಗೆ ಯುವಕರೂ ಸಾಥ್ ನೀಡಿದ್ದಾರೆ.
ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಕೂಡ ಬಣ್ಣದಾಟ ಆಡುವ ಮೂಲಕ ಹೋಳಿ ಹಬ್ಬ ಆಚರಿಸಿದ್ದಾರೆ. ವಿವಿಧ ಇಲಾಖೆಗಳ ಸರ್ಕಾರಿ ನೌಕರರೊಂದಿಗೆ ತಮ್ಮ ನಿವಾಸದ ಆವರಣದಲ್ಲೇ ಪರಸ್ಪರ ಬಣ್ಣ ಎರಚಿ ಅವರು ಖುಷಿಪಟ್ಟರು. ಶಿಕ್ಷಕ ಮಹಾದೇವ ಸತ್ತಿಗೇರಿ ಹೋಳಿ ಪದ ಹಾಗೂ ಜಾನಪದ ಹಾಡುಗಳನ್ನು ಹಾಡಿ ಮನರಂಜಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ ಹಾಗೂ ಉಪ ವಿಭಾಗಾಧಿಕಾರಿ ಅಶೋಕ ತೇಲಿ ಕೂಡ ಪಾಲ್ಗೊಂಡಿದ್ದರು. ಕರ್ನಾಟಕ ಕಲಾ ಮಹಾವಿದ್ಯಾಲಯದ ಎದುರು ಶಾಸಕ ಅರವಿಂದ ಬೆಲ್ಲದ ಅವರು ಗಡಿಗೆ ಒಡೆಯುವ ಸ್ಪರ್ಧೆ ಆಯೋಜಸಿದ್ದರು. ಸಾವಿರಾರು ಸಂಖ್ಯೆಯಲ್ಲಿ ಯುವಕರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಶಿವಮೊಗ್ಗದಲ್ಲಿ ಹೋಳಿ ಆಚರಣೆ; ಡಿಜೆ ಹಾಡಿಗೆ ಭರ್ಜರಿ ಸ್ಟೆಪ್ಸ್.. ಬಣ್ಣದಲ್ಲಿ ಮಿಂದೆದ್ದ ಯುವಕ, ಯುವತಿಯರು