ಕೇರಳದಲ್ಲಿ ಮಳೆ ಆರ್ಭಟ: ಒಬ್ಬ ಸಾವು, ಉಕ್ಕಿಹರಿದ ನದಿಗಳು:ಇಡುಕ್ಕಿ ಜಿಲ್ಲೆಯಲ್ಲಿ ರೆಡ್ ಅಲರ್ಟ್ - ಕಡಲದಲ್ಲಿ ಅಲೆಗಳ ಅಬ್ಬರ

🎬 Watch Now: Feature Video

thumbnail

By

Published : Jul 5, 2023, 6:58 PM IST

Updated : Jul 5, 2023, 7:35 PM IST

ತಿರುವನಂತಪುರಂ(ಕೇರಳ) ಎರಡು ದಿನಗಳಿಂದ ಕೇರಳದಲ್ಲಿ ಮಳೆ ಅರ್ಭಟ ಜೋರಾಗಿದ್ದು, ವಿವಿಧ ಕಡೆ ಅಪಾರ ಹಾನಿಯಾದ ಪ್ರಕರಣಗಳು ವರದಿಯಾಗಿವೆ. ಇಡುಕ್ಕಿ ಜಿಲ್ಲೆಯಲ್ಲಿ ಅಪಾರ ಮಳೆ ಬೀಳುತ್ತಿರುವುದರಿಂದ  ರೆಡ್ ಅಲರ್ಟ್​ ಘೋಷಣೆ ಮಾಡಲಾಗಿದೆ. ಇನ್ನುಳಿದ 11 ಜಿಲ್ಲೆಗಳಲ್ಲಿಯೂ ಯೆಲೊ ಅಲರ್ಟ್​ ಕೂಡ ಘೋಷಿಸಲಾಗಿದೆ.  ಹವಾಮಾನ ಇಲಾಖೆ  ಮಂಜಾಗ್ರತಾ ಕ್ರಮವಾಗಿ ಕಾಲ ಕಾಲಕ್ಕೆ ಸಲಹೆ ಸೂಚನೆ ನೀಡುತ್ತಿದೆ.ಭಾರೀ ಮಳೆಯಿಂದ ಭೂಕುಸಿತ, ತಗ್ಗು ಪ್ರದೇಶ ಹಾಗೂ ನಗರ ಪ್ರದೇಶಗಳಲ್ಲಿ ಜಲಾವೃತವಾಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆ ನೀಡಲಾಗಿದೆ.

ಕಣ್ಣೂರಿನಲ್ಲಿ ಮನೆಯ ಮುಂಭಾಗದ ನೀರಿನ ಹೊಂಡಕ್ಕೆ ಒಬ್ಬರು ಬಿದ್ದು ಸಾವಿಗೀಡಾಗಿರುವ ವರದಿ ಪ್ರಕಟವಾಗಿದೆ. ಫೌಜಿಲ್ ಬಶೀರ್ (50) ಮೃತ ದುರ್ದೈವಿ ಎಂದು ತಿಳಿದು ಬಂದಿದೆ.

 ತಗ್ಗು ಪ್ರದೇಶಗಳು ಜಲಾವೃತ : ವಿವಿಧ ಜಿಲ್ಲೆಗಳಲ್ಲಿ ನಿರಂತರ ಸುರಿದ ಮಳೆಗೆ ಹಲವು ಕಡೆ ಮನೆಗಳು ಕುಸಿತ, ಪ್ರಾರ್ಥನಾ ಮಂದಿರಗಳಿಗೆ ಹಾನಿಯಾಗಿದೆ. ತಿರುವನಂತಪುರಂ, ಎರ್ನಾಕುಲಂ ಮತ್ತು ಕಾಸರಗೋಡು ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ಕಡಲದಲ್ಲಿ ಅಲೆಗಳ ಅಬ್ಬರವೂ ಜೋರಾಗಿದ್ದು,ಕಡಲ್ಕೊರೆತ ಹೆಚ್ಚಾಗಿದೆ. 

 ಸಂಚಾರವೂ ಅಸ್ತವ್ಯಸ್ತ: ಇಡುಕ್ಕಿ ಮತ್ತು ತಿರುವನಂತಪುರಂ ಜಿಲ್ಲೆಗಳ ಅಣೆಕಟ್ಟು ಸಂಪೂರ್ಣ ತೆರೆದು ಬಿಡಲಾಗಿದ್ದು, ಪೆರಿಯಾರ್ ದಡದ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಕಣ್ಣೂರು ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಮರಗಳು ಬಿದ್ದು ವಾಹನಗಳಿಗೆ ಧಕ್ಕೆಯಾಗಿದ್ದು, ಸಂಚಾರವೂ ಅಸ್ತವ್ಯಸ್ತಗೊಂಡಿದೆ.  ಕೋಯಿಕ್ಕೋಡ್ ಜಿಲ್ಲೆಯಲ್ಲಿ ಬಾವಿಯೊಂದು ಕುಸಿದಿರುವುದು ಸ್ಥಳೀಯ ನಿವಾಸಿಗಳನ್ನು ಚಿಂತೆಗೀಡು ಮಾಡಿದೆ.

ಗುಡ್ಡಗಾಡು ಪ್ರದೇಶಗಳಲ್ಲಿ ಬೀಚ್‌ಗಳು ಮತ್ತು ಪ್ರವಾಸಿ ತಾಣಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಪಂಬಾ ಮತ್ತು ಮಣಿಮಾಲಾ ನದಿಗಳು ಉಕ್ಕಿ ಹರಿಯುವ ಸಂಭವವಿದ್ದು, ಅಲ್ಲಿನ ನಿವಾಸಿಗಳು ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಭಾರಿ ಮಳೆಯಿಂದಾಗಿ ತ್ರಿಶೂರ್ ವಾಡನಪಲ್ಲಿಯಲ್ಲಿ ರಸ್ತೆ ಹಾಳಾಗಿ ಸಂಚಾರಕ್ಕೆ ಅಡಚಣೆವುಂಟಾಯಿತು. ಇದರಿಂದ ಆಕ್ರೋಶಗೊಂಡ ಪ್ರಯಾಣಿಕರು ರಸ್ತೆ ಅವ್ಯವಸ್ಥೆಯಿಂದ ಪ್ರತಿಭಟನೆ ನಡೆಸಿದರು. ತ್ರಿಶೂರ್ ಜಿಲ್ಲೆಯ ಕುಥಿರನ್‌ನಲ್ಲಿಯೂ ರಸ್ತೆಯೂ ಕಿತ್ತುಕೊಂಡು ಹೋಗಿದೆ. ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು,ಜನರು ಕತ್ತಲಲ್ಲೇ ಜೀವನ ಕಳೆಯಬೇಕಾಗಿದೆ. ಪೂರ್ವದ ಕಡೆಯಿಂದ ನೀರಿನ ಒಳಹರಿವು ಪ್ರಮಾಣ ಹೆಚ್ಚಾಗಿದ್ದು, ಆಲಪ್ಪುಳ ಜಿಲ್ಲೆಯ ಅನೇಕ ತಗ್ಗು ಪ್ರದೇಶಗಳು ನೀರಿನಲ್ಲಿ ಜಲಾವೃತಗೊಂಡಿವೆ.

ಇದನ್ನೂಓದಿ:ಉತ್ತರಪ್ರದೇಶದಲ್ಲಿ ಮತ್ತೆ ಬುಲ್ಡೋಜರ್ ಸದ್ದು​.. ರೇಪ್​ ಕೇಸ್​ ಆರೋಪಿಯ ನಿವಾಸ ಧ್ವಂಸ: ವಿಡಿಯೋ

Last Updated : Jul 5, 2023, 7:35 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.