ದೇವನಹಳ್ಳಿ ಸುತ್ತಮುತ್ತ ಬಿರುಗಾಳಿ ಸಹಿತ ಭಾರಿ ಮಳೆ: ವಾಹನ ಸವಾರರು ಹೈರಾಣ
🎬 Watch Now: Feature Video
ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ಸುತ್ತಮುತ್ತ ಮಂಗಳವಾರ ಸಂಜೆ ಧಾರಾಕಾರ ಮಳೆಯಾಗಿದೆ. ಸತತ ಎರಡು ಗಂಟೆಯಿಂದ ಬಿಟ್ಟುಬಿಡದೆ ಮಳೆ ಅಬ್ಬರಿಸಿದೆ. ಬಿರುಗಾಳಿ ಸಹಿತ ಸುರಿದ ಮಳೆಗೆ ವಾಹನ ಸವಾರರು ಹೈರಾಣಾದರು. ಭಾರಿ ಮಳೆಗೆ ದೇವನಹಳ್ಳಿ ಹೊರವಲಯದ ಬೆಂಗಳೂರು ರಸ್ತೆಯ ಕೆಂಪೇಗೌಡ ಸರ್ಕಲ್ನಲ್ಲಿ ಮೂರ್ನಾಲ್ಕು ಅಡಿಗಳಷ್ಟು ಮಳೆ ನೀರು ನಿಂತಿದೆ.
ಇದರಿಂದ ಕೆಲವು ದ್ವೀಚಕ್ರ ವಾಹನಗಳು ಹಾಗೂ ಗೂಡ್ಸ್ ಆಟೋಗಳು ನೀರಿನಲ್ಲಿ ಮುಳುಗಿವೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಲಾಗದೆ ವಾಹನ ಸಾವರರು ಪರದಾಡುವಂತಾಗಿದ್ದು, ರಸ್ತೆ ಕಾಣದೆ ಕಾರುಗಳು ನಿಂತಲ್ಲೇ ನಿಂತಿವೆ. ಇನ್ನು ಬಿರುಗಾಳಿ ಸಹಿತ ಮಳೆಯಾಗಿದ್ದರಿಂದ ಹೆದ್ದಾರಿಯಲ್ಲಿದ್ದ ಬ್ಯಾರಿಕೇಡ್ಗಳು ನೆಲಕ್ಕುರುಳಿವೆ. ವರುಣನ ಆರ್ಭಟಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ.
ಇದನ್ನೂ ಓದಿ:ರಾಜ್ಯದಲ್ಲಿ ಉಷ್ಣ ಮಾರುತದ ಆತಂಕ : ಹವಾಮಾನ ಇಲಾಖೆಯಿಂದ ಮಾಹಿತಿ
ಇನ್ನು ಹವಾಮಾನ ಇಲಾಖೆಯು ಮಳೆ ಮುನ್ಸೂಚನೆ ನೀಡಿದ್ದು, ರಾಜ್ಯದಲ್ಲಿ ಇನ್ನೂ ಎರಡು ದಿನ ವರುಣ ಅಬ್ಬರಿಸಲಿದ್ದಾನೆ. ದಕ್ಷಿಣ ಒಳನಾಡಿನ ಬಹುತೇಕ ಕಡೆ ಮುಂದಿನ ಎರಡು ದಿನ ಗುಡುಗು ಸಹಿತ ಮಳೆಯಾಗಲಿದೆ. ಜನರಿಗೆ ಸುರಕ್ಷತೆಯಿಂದ ಇರುವಣಂತೆ ಇಲಾಖೆ ಮುನ್ಸೂಚನೆ ನೀಡಿದೆ.