ಕೊಪ್ಪಳದಲ್ಲಿ ಭಾರೀ ಮಳೆ.. ಹಳ್ಳದಾಟಲು ಜೆಸಿಬಿ ಬಕೆಟ್ ಬಳಸಿದ ಜನ - ಜೆಸಿಬಿ ಬಕೆಟ್ನಲ್ಲಿ ನಿಂತು ಜನರು ಹಳ್ಳ ದಾಟಿದ ವಿಡಿಯೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16632273-thumbnail-3x2-rain.jpg)
ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಂಡ್ರಗಲ್ ಗ್ರಾಮದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಬಂಡ್ರಗಲ್ ಹಳ್ಳ, ಜಾತಿಗ್ಯಾನ ಹಳ್ಳ ಉಕ್ಕಿ ಹರಿದಿವೆ. ಅಲ್ಲಿಯ ಜನರು ಬಂಡ್ರಗಲ್ ಹಳ್ಳದ ಪ್ರವಾಹ ಲೆಕ್ಕಿಸದೇ ಜೆಸಿಬಿ ಬಕೆಟ್ ಮೂಲಕ ಹಳ್ಳ ದಾಟಿ ಹುಚ್ಚು ಸಾಹಸ ಮೆರೆದಿದ್ದಾರೆ. ಜೆಸಿಬಿ ಬಕೆಟ್ನಲ್ಲಿ ನಿಂತು ಜನರು ಹಳ್ಳ ದಾಟಿದ ವಿಡಿಯೋ ಸ್ಥಳೀಯರು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಕೊಪ್ಪಳದ ಯಲಬುರ್ಗಾ ತಾಲೂಕಿನಲ್ಲಿ ಹಳ್ಳ ದಾಟಲು ಹೋಗಿ ಇಬ್ಬರು ಪೊಲೀಸರು ಮತ್ತು ನಾಲ್ವರು ಮಹಿಳೆಯರು ನೀರಲ್ಲಿ ಕೊಚ್ಚಿಕೊಂಡು ಹೋಗಿ ಸಾವಿಗೀಡಾದ ಘಟನೆ ಮಾಸುವ ಮುನ್ನವೇ ಜಿಲ್ಲೆಯಲ್ಲಿ ದುಸ್ಸಾಹಸಕ್ಕೆ ಜನರು ಮುಂದಾಗುತ್ತಿರುವುದು ವಿಪರ್ಯಾಸ.
Last Updated : Feb 3, 2023, 8:29 PM IST