ಅಧಿದೇವತೆ ಚಾಮುಂಡೇಶ್ವರಿಗೆ ಮಹಾಮಂಗಳಾರತಿ ವೇಳೆ ಗನ್ ಸೆಲ್ಯೂಟ್- ವಿಡಿಯೋ ನೋಡಿ
🎬 Watch Now: Feature Video
ಮೈಸೂರು: ನಾಡ ಅಧಿದೇವತೆ ಚಾಮುಂಡೇಶ್ವರಿಗೆ ಪ್ರತಿನಿತ್ಯವೂ ಮಹಾಮಂಗಳಾರತಿಯ ಸಂದರ್ಭದಲ್ಲಿ ರಾಜಪರಂಪರೆಯಂತೆ ಗನ್ ಸೆಲ್ಯೂಟ್ ನೀಡುವ ಸಂಪ್ರದಾಯ ಇಂದಿಗೂ ತಪ್ಪದೆ ನೆರವೇರುತ್ತಿದೆ. ಚಾಮುಂಡೇಶ್ವರಿ ಮೈಸೂರು ರಾಜವಂಶಸ್ಥರ ಕುಲದೇವತೆ. ರಾಜರಿಗೆ ಹೇಗೆ ಗೌರವ ವಂದನೆ ಸಂಪ್ರದಾಯ ಇದೆಯೋ, ಅದೇ ರೀತಿ ಚಾಮುಂಡಿ ಬೆಟ್ಟದಲ್ಲಿರುವ ದೇವಿಯ ಮೂಲಮೂರ್ತಿಗೆ ಮಹಾಮಂಗಳಾರತಿ ನಡೆಯುವ ವೇಳೆ ರಕ್ಷಣೆಗೆ ನಿಯೋಜಿಸಿರುವ ಮೀಸಲು ಪಡೆಯ ಪೊಲೀಸರಿಂದ ಗನ್ ಸೆಲ್ಯೂಟ್ ನೀಡಲಾಗುತ್ತದೆ. ಗನ್ ಸೆಲ್ಯೂಟ್ ಸಮಯದಲ್ಲಿ ಮಹಾಮಂಗಳಾರತಿ ನಡೆದು ಉತ್ಸವ ಮೂರ್ತಿಗೆ ನೈವೇದ್ಯವಾದ ನಂತರ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ನವರಾತ್ರಿಯ ನಂತರ ನಡೆಯುವ ಚಾಮುಂಡೇಶ್ವರಿ ರಥೋತ್ಸವಕ್ಕೆ ರಾಜವಂಶಸ್ಥರು ಚಾಲನೆ ನೀಡುತ್ತಾರೆ. ರಥದ ಮುಂಭಾಗ ದೇವಸ್ಥಾನದ ಸುತ್ತ 21 ಕುಶಾಲತೋಪುಗಳನ್ನು ಹಾರಿಸುವ ಮೂಲಕ ಗೌರವ ವಂದನೆ ನಡೆಯುತ್ತದೆ. ಅದೇ ರೀತಿಯ ಗೌರವವನ್ನು ಅರಮನೆಯಲ್ಲಿ ಜಂಬೂಸವಾರಿಗೆ ಪುಷ್ಪಾರ್ಚನೆ ಸಲ್ಲಿಸಿದ ನಂತರ ರಾಷ್ಟ್ರಗೀತೆ ನುಡಿಸುವಾಲೂ ನೀಡಲಾಗುತ್ತದೆ. ಶ್ರೀ ಚಾಮುಂಡೇಶ್ವರಿ ನಿತ್ಯವೂ ಗನ್ ಸಲ್ಯೂಟ್ ಗೌರವ ಪಡೆಯುವ ಏಕೈಕ ದೇವಾಲಯ ಎಂಬ ಪ್ರಸಿದ್ಧ ಹೊಂದಿದೆ.
ಇದನ್ನೂ ಓದಿ: ಮೈಸೂರು ದಸರಾ: ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಗರುಡ ಉತ್ಸವ - ವಿಡಿಯೋ