ಆಧಾರ್ ತಿದ್ದುಪಡಿಗಾಗಿ ರಾತ್ರಿಯೇ ಬಂದು ಮಲಗಿದ ಜನರು

By

Published : Jul 26, 2023, 10:10 PM IST

thumbnail

ಚಾಮರಾಜನಗರ : ಆಧಾರ್ ತಿದ್ದುಪಡಿ ಮಾಡಿಸಲು ಜನಜಾತ್ರೆ ಸೇರುತ್ತಿರುವ ಹಿನ್ನೆಲೆ ರಾತ್ರಿಯೇ ಬಂದು ಸೇವಾ ಕೇಂದ್ರದ ಮುಂದೆ ಜನರು ಮಲಗಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯ ತಾಲೂಕು ಕಚೇರಿಯಲ್ಲಿ ನಡೆದಿದೆ.

ಕಳೆದ ಮೂರು ದಿನಗಳಿಂದಲೂ ನಿತ್ಯ ಸೇವಾಕೇಂದ್ರಕ್ಕೆ ಬಂದರೂ ಟೋಕನ್ ಸಿಗದ ಹಿನ್ನೆಲೆ ಬೇಸತ್ತ ಹಲವರು ತಾಲೂಕು ಕಚೇರಿ ಮುಂದೆ ಬುಧವಾರ ರಾತ್ರಿಯೇ ಬಂದು ಮಲಗಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಚೆನ್ನಾಜಮ್ಮ, ಸಿದ್ದಮ್ಮ, ನೇನೆಕಟ್ಟೆ ಗ್ರಾಮದ ಮಾಲೇಗೌಡ, ಬೆಟ್ಟಗೌಡನಹುಂಡಿ ಗ್ರಾಮದ ಬೆಳ್ಳಿ ಬಸವೇಗೌಡ ಎಂಬುವವರು ಶಾಲು ಹೊದ್ದು ಬಂದು ಮಲಗಿದ್ದು, ಟೋಕನ್​ಗಾಗಿ ಜನರು ಎಷ್ಟೊಂದು ಕಷ್ಟಪಡುತ್ತಿದ್ದಾರೆ ಎಂಬುದಕ್ಕೆ ಈ ಘಟನೆ ನಿದರ್ಶನವಾಗಿದೆ.

ಸರ್ಕಾರ ವಿವಿಧ ಯೋಜನೆಗಳಿಗಾಗಿ ಮಾಡಿಸಲೇಬೇಕು ಆಧಾರ್ ತಿದ್ದುಪಡಿ : ಸರ್ಕಾರದ ವಿವಿಧ ಯೋಜನೆಗಳಿಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್​ಗೆ ಫೋನ್​ ನಂಬರ್,​ ಪಡಿತರ ಕಾರ್ಡ್​ಗಳಲ್ಲಿ ಯಜಮಾನಿ ಹೆಸರುಗಳನ್ನು ತಿದ್ದುಪಡಿ ಮಾಡಿಸಬೇಕಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬ್ಯಾಂಕ್ ವಿವರ, ಮೊಬೈಲ್ ನಂಬರ್​ ಲಿಂಕ್ ಆಗಿರುವ ಆಧಾರ್ ಕಾರ್ಡ್ ಕಡ್ಡಾಯವಾಗಿರುವುದರಿಂದ ಸೇವಾ ಕೇಂದ್ರದ ಮುಂದೆ ನಿತ್ಯ ಜನಜಾತ್ರೆಯೇ ಬಂದು ಸೇರುತ್ತಿದ್ದು, ಟೋಕನ್ ಸಿಗದ ಇವರುಗಳು ರಾತ್ರಿಯೇ ಬಂದು ಮಲಗಿದ್ದಾರೆ. 

ಇದನ್ನೂ ಓದಿ: ಇಬ್ಬರ ಹೆಸರಲ್ಲಿ ಒಂದೇ ಆಧಾರ್‌ ನಂಬರ್‌.. ಒಬ್ಬರ ಖಾತೆಗೆ ಜಮೆ ಮಾಡಿದ ಹಣ ಇನ್ನೊಬ್ಬರ ಖಾತೆಗೆ ಕ್ರೆಡಿಟ್..!

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.