ಬೆಂಗಳೂರಿನಲ್ಲಿ ಶ್ರದ್ಧಾ ಭಕ್ತಿಯ ಕ್ರಿಸ್‌ಮಸ್ ಆಚರಣೆ: ವಿಡಿಯೋ
🎬 Watch Now: Feature Video
ಬೆಂಗಳೂರು: ಯೇಸು ಕ್ರಿಸ್ತನ ಜನ್ಮದಿನವಾದ ಕ್ರಿಸ್‌ಮಸ್ ಹಬ್ಬವನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಶ್ರದ್ಧಾ ಭಕ್ತಿಯಿಂದ ಕ್ರಿಶ್ಚಿಯನ್ ಧರ್ಮೀಯರು ಆಚರಿಸಿದರು. ಭಾನುವಾರ ರಾತ್ರಿಯಿಂದಲೇ ನಗರದ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಕರೋಲ್ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಫ್ರೆಜರ್ ಟೌನ್ನ ಸೇಂಟ್ ಫ್ರಾನ್ಸಿಸ್ ಕ್ಷೇವಿಯರ್ ಕೆಥೆಡ್ರಲ್ ಚರ್ಚ್‌ನಲ್ಲಿ ಯೇಸುವಿನ ಜನನದ ಬಗ್ಗೆ ಗೀತಗಾಯನ ಮತ್ತು ಗೊಂಬೆಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಜನರು ಚರ್ಚ್‌ಗೆ ಭೇಟಿ ನೀಡಿ ಪ್ರಾರ್ಥಿಸಿ, ಪ್ರದರ್ಶನ ನೋಡಿದರು. ಯೇಸುವಿನ ಪ್ರತಿಮೆಯ ಮುಂದೆ ಮೊಂಬತ್ತಿ ಹಿಡಿದು ನಮಿಸಿದರು.
ಶಿವಾಜಿನಗರದ ಸೆಂಟ್ ಮೇರಿಸ್ ಬೆಸಿಲಿಕಾ, ಬ್ರಿಗೇಡ್ ರಸ್ತೆಯ ಸೇಂಟ್ ಪ್ಯಾಟ್ರಿಕ್ಸ್ ಚರ್ಚ್, ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯ ಸೇಂಟ್ ಜೋಸೆಫ್ ಚರ್ಚ್, ಸೇಂಟ್ ಜಾನ್ಸ್ ಚರ್ಚ್ ಸೇರಿದಂತೆ ಅನೇಕ ಕಡೆಗಳಲ್ಲಿ ಕ್ರಿಸ್‌ಮಸ್ ಸಂಭ್ರಮ ಕಳೆಗಟ್ಟಿತ್ತು. ಚರ್ಚ್‌ಗಳಲ್ಲಿ ಬೃಹದಾಕಾರದ ನಕ್ಷತ್ರಗಳು, ಕ್ರಿಸ್‌ಮಸ್ ವೃಕ್ಷಗಳು, ಬಣ್ಣ ಬಣ್ಣದ ಬಲೂನುಗಳು, ಘಂಟೆಗಳು ಹಾಗೂ ಸಾಂತಾ ಕ್ಲಾಸ್ ಪ್ರತಿರೂಪಗಳು ಗಮನ ಸೆಳೆದವು.
ಮಾರುಕಟ್ಟೆಗಳಲ್ಲಿ ಗ್ರಾಹಕರನ್ನು ಸೆಳೆಯಲು ಕ್ರಿಸ್‌ಮಸ್ ವೃಕ್ಷಗಳು ರಂಗು ರಂಗಿನ ದೀಪಗಳಿಂದ ಕಂಗೊಳಿಸುತ್ತಿದ್ದವು. ಬೇಕರಿಗಳಲ್ಲಿ ವಿಶೇಷ ಕೇಕ್‌ಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಕ್ರೈಸ್ತ ಸಮುದಾಯದ ಮನೆಗಳಲ್ಲಿ ಸಂಭ್ರಮವಿತ್ತು. ಮನೆಗಳ ಮೇಲೆ ನಕ್ಷತ್ರಗಳು, ವಿದ್ಯುತ್ ದೀಪಗಳು ಕಂಡುಬಂದವು.
ಇದನ್ನೂ ನೋಡಿ: ದಾವಣಗೆರೆ: ಸಂತ ತೋಮಸರ ಚರ್ಚ್‌ನಲ್ಲಿ ಕ್ರಿಸ್‌ಮಸ್ ಸಂಭ್ರಮ- ವಿಡಿಯೋ