ಸರ್ಕಾರಿ ಬಸ್​ಗಳೆಲ್ಲ ರಶ್ ರಶ್.. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ: ವಿಡಿಯೋ - ಉಚಿತ ಬಸ್ ಪ್ರಯಾಣ

🎬 Watch Now: Feature Video

thumbnail

By

Published : Jun 16, 2023, 1:50 PM IST

ಗದಗ: ಮಹಿಳೆಯರಿಗಾಗಿ ನೀಡಲಾಗಿರುವ (ಉಚಿತ ಬಸ್ ಪ್ರಯಾಣ) ಶಕ್ತಿ ಯೋಜನೆ ಆರಂಭವಾಗಿದ್ದೇ ತಡ, ಸರ್ಕಾರಿ ಬಸ್​ಗಳೆಲ್ಲ ಪ್ರಯಾಣಿಕರಿಂದ ತುಂಬಿ ತುಳುಕಿ ಬಸ್​ನೊಳಗಡೆ ಪ್ರಯಾಣಿಕರೆಲ್ಲ ಹೈರಾಣಾಗಿರುವ ಘಟನೆ ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ಕಂಡು ಬಂದಿದೆ. ಕಾಂಗ್ರೆಸ್​ ಸರ್ಕಾರದ ಶಕ್ತಿ ಯೋಜನೆ ಆರಂಭವಾದ ಬಳಿಕ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಬಸ್​​​​ನೊಳಗೆ  ಹೋಗಲು ಫುಲ್ ಸರ್ಕಸ್ ಮಾಡಬೇಕಾದ ಪರಿಸ್ಥಿತಿ ತಲೆದೋರಿದೆ.

ಮಹಿಳೆಯರನ್ನು ತುಂಬಿಕೊಂಡು ಹೋಗೋ ಬಸ್​ಗಳೆಲ್ಲವೂ ಭರ್ತಿಯಾಗಿದ್ದು ಬಸ್​ಗೆ ಜೋತುಗೊಂಡು ಹೋಗುವ ವಾತಾವರಣ ನಿರ್ಮಾಣವಾಗಿದೆ. ನರಗುಂದದಿಂದ ರೋಣ ಕಡೆ ಈ ಬಸ್ ಹೊರಟಿದ್ದು ಸ್ಥಳೀಯರು ಬಸ್​ನಲ್ಲಿ ನೇತಾಡಿಕೊಂಡು ಹೋಗುವ ದೃಶ್ಯ, ಮಕ್ಕಳನ್ನು ಕರೆದುಕೊಂಡು ಬಾಗಿಲಿನಲ್ಲೇ ಜೋತು ಬಿದ್ದುಕೊಂಡು ಸಾಗುತ್ತಿರುವ ನೋಟಗಳೂ ಮೊಬೈಲ್​ನಲ್ಲಿ ಸೆರೆಯಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸಂಭವಿಸಬಹುದಾದ ದುರಂತವನ್ನು ತಪ್ಪಿಸಿ ಎನ್ನುವ ಒತ್ತಾಯಗಳೂ ಕೇಳಿ ಬಂದಿವೆ.

ಇದನ್ನೂ ಓದಿ: ಮಹಿಳಾ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೇ ಮುಂದೆ ಸಾಗಿದ ಚಾಲಕ.. ನಮ್ಮ ಮೇಲೆ ಬಸ್​ ಹರಿಸುವ ಯತ್ನ ಎಂದು ಮಹಿಳೆಯರ ಆಕ್ರೋಶ!

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.