ಮೈಸೂರು ಅರಮನೆಯಲ್ಲಿ ಯದುವೀರ್‌ರಿಂದ ಸರಸ್ವತಿ ಪೂಜೆ, ಪಕ್ಕದಲ್ಲಿ ಪುತ್ರ ಆದ್ಯವೀರ್- ವಿಡಿಯೋ ನೋಡಿ - ವಿದ್ಯಾ ದೇವತೆ ಸರಸ್ವತಿ

🎬 Watch Now: Feature Video

thumbnail

By ETV Bharat Karnataka Team

Published : Oct 20, 2023, 3:24 PM IST

Updated : Oct 20, 2023, 3:52 PM IST

ಮೈಸೂರು: ಶರನ್ನವರಾತ್ರಿಯ 6ನೇ ದಿನವಾದ ಶುಕ್ರವಾರ ಮೈಸೂರು ಅರಮನೆಯಲ್ಲಿ ವಿದ್ಯಾದೇವತೆ ಸರಸ್ವತಿಗೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೆಳಿಗ್ಗೆ 10.5 ರಿಂದ 10.25 ರ ಶುಭ ಲಗ್ನದಲ್ಲಿ ಪೂಜೆ ನೆರವೇರಿಸಿದರು. ಅರಮನೆಯ ರಾಜಪುರೋಹಿತರ ಸಮ್ಮುಖದಲ್ಲಿ ಸರಸ್ವತಿ ವಿಗ್ರಹವಿಟ್ಟು ಪುರಾತನ ಕಾಲದ ವೀಣೆ, ಧಾರ್ಮಿಕ ಗ್ರಂಥಗಳಿಗೆ ಪೂಜೆ ನೆರವೇರಿಸಲಾಯಿತು.

ಪುರೋಹಿತರು ವೇದಘೋಷಗಳ ಮಾಡಿದರು. ತಂದೆಯ ಪಕ್ಕದಲ್ಲಿ ಮಗ ಆದ್ಯವೀರ್ ನರಸಿಂಹರಾಜ ಒಡೆಯರ್ ಭಾಗವಹಿಸಿದ್ದರು. ನಾಳೆ ಶನಿವಾರ (ಅಕ್ಟೋಬರ್ 21) ಕಾಳರಾತ್ರಿ ಪೂಜೆ, ಅಕ್ಟೋಬರ್ 22ರಂದು ಭಾನುವಾರ ದುರ್ಗಾಷ್ಠಮಿ ಪೂಜೆ, ಸೋಮವಾರ ಅಕ್ಟೋಬರ್ 23ರಂದು ಸಾಂಪ್ರದಾಯಿಕ ಆಯುಧ ಪೂಜೆ ಹಾಗೂ ಅಕ್ಟೋಬರ್ 24ರ ಮಂಗಳವಾರ ವಿಜಯ ದಶಮಿ ಪೂಜೆ ನೆರವೇರಲಿದೆ. ಈ ಮೂಲಕ ಅರಮನೆಯ ಶರನ್ನವರಾತ್ರಿಯ ಸಾಂಪ್ರದಾಯಿಕ ಪೂಜೆಗಳು ಸಂಪನ್ನಗೊಳ್ಳಲಿವೆ.

ಇನ್ನು, ವಿಶ್ವವಿಖ್ಯಾತ ಜಂಬೂ ಸವಾರಿಗೆ ಮೈಸೂರು ಸಕಲ ರೀತಿಯಿಂದಲೂ ಸಜ್ಜಾಗಿದೆ. ವರ್ಷಂಪ್ರತಿ ಜರುಗುವ ಮಹೋತ್ಸವ ನೋಡಲು ದೇಶ, ವಿದೇಶಗಳಿಂದ ಸಾವಿರಾರು ಜನರು ಸಾಂಸ್ಕೃತಿಕ ನಗರಿಗೆ ಬಂದಿದ್ದಾರೆ.

ಇದನ್ನೂ ಓದಿ: ಮೈಸೂರು ದಸರಾ: ಪಾರಂಪರಿಕ ಟಾಂಗಾ ಸವಾರಿ ಮಾಡಿದ ಸಚಿವ ಎಚ್ ಕೆ ಪಾಟೀಲ್ ದಂಪತಿ

Last Updated : Oct 20, 2023, 3:52 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.